ಕನ್ನಡ ಸಿನಿಮಾ ರಂಗದ ನಿರ್ದೇಶಕ ಕಮ್ ನಟ ವೀರೇಂದ್ರ ಬಾಬು ಮುಂದಿನ ಬಾರಿಯ ಎಲೆಕ್ಷನ್‍ನಲ್ಲಿ ತಮ್ಮದೇ ಪಕ್ಷದಿಂದ ಎಮ್‍ಎಲ್‍ಎ, ಎಂಪಿ ಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಕಳೆದ ಕೆಲ ವರ್ಷಗಳ ಹಿಂದೆ ಸ್ಯಾಂಡಲ್ ವುಡ್‍ನಲ್ಲಿ ಸ್ವಯಂ ಕೃಷಿ, ಅಂತಾ ಸಿನಿಮಾ ನಿರ್ದೇಶನ ಮಾಡಿ ತಾನೇ ಹಿರೋ ಆಗಿ ಆಕ್ಟ್ ಮಾಡಿದ್ದ ವಿರೇಂದ್ರಬಾಬು ಮೇಲೆ ಇಂಥದ್ದೊಂದು ಆರೋಪ ಕೇಳಿಬಂದಿದೆ. ಬೆಂಗಳೂರಿನ ಯಲಹಂಕ ವಾಸಿಯಾಗಿರುವ ವೀರೇಂದ್ರಬಾಬು, ಮುಂದಿನ ಎಲೆಕ್ಷನ್ ವೇಳೆಗೆ ರಾಷ್ಟ್ರೀಯ ಜನ ಹಿತ ಪಕ್ಷ ಮಾಡೋದಾಗಿ ಹೇಳಿದ್ದರಂತೆ. ಆ ಪಕ್ಷಕ್ಕೆ ರಾಜ್ಯಾದ್ಯಂತ, ಎಂಎಲ್‍ಎ, ಎಂಪಿ ಸೇರಿದಂತೆ ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಅಂತಾ ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ.
Advertisement
ಎಮ್‍ಎಲ್‍ಎ ಆಗಬೇಕು ಅಂತಾ ಆಸೆ ಇರೋರು, ಲಕ್ಷಾಂತರ ರೂಪಾಯಿ ಹಣ ನೀಡಬೇಕಾಗುತ್ತೆ. ಆ ಹಣದಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಆನ್ಲೈನ್ ಶಿಕ್ಷಣ ಸೇರಿದಂತೆ, ವಿವಿಧ ಉಪಕರಣಗಳನ್ನು ನೀಡುವ ಮೂಲಕ ಜನರನ್ನು ತಮ್ಮ ಪಕ್ಷದ ಕಡೆಗೆ ಸೆಳೆಯುವ ಪ್ಲಾನ್ ಬಗ್ಗೆ ಹೇಳಿಕೊಂಡಿದ್ದರಂತೆ. ಇದನ್ನು ನಂಬಿದ ಬಸವರಾಜ್ ಘೋಷಲ್ ಸೇರಿದಂತೆ ಹತ್ತಾರು ಜನರು, ವಿರೇಂದ್ರಬಾಬುಗೆ ಒಂದು ಕೋಟಿ ಎಂಬತ್ತು ಲಕ್ಷ ಹಣ ನೀಡಿರುವುದಾಗಿ ವಿರೇಂದ್ರ ಬಾಬು ಸೇರಿದಂತೆ ಏಳು ಜನರ ಮೇಲೆ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್ ಡಿಸೈನರ್ ಮಸಾಬ ಗುಪ್ತಾ
Advertisement
Advertisement
ಇದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ವಿರೇಂದ್ರ ಸಿನಿಮಾದಲ್ಲಿ ಕೈಸುಟ್ಟುಕೊಂಡ ನಂತರ ತನ್ನದೇ ಆದ ಕೇಬಲ್ ಚಾನಲ್, ಕರ್ನಾಟಕ ರಕ್ಷಣಾ ಪಡೆ ಅನ್ನೋ ಸಂಘಟನೆ ಕೂಡ ನಡೆಸ್ತಿದ್ದಾರೆ. ಈ ಸಂಘಟನೆಗೂ ತಾಲೂಕು ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿದಂತೆ ವಿವಿಧ ಪೋಸ್ಟ್ ಕೊಡಸ್ತೀನಿ ಅಂತಾ ಸಾಕಷ್ಟು ಜನರ ಬಳಿ ಹಣ ತೆಗೆದುಕೊಂಡು ವಂಚಿಸಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ಅಲ್ಲದೇ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಕೋಟ್ಯಾಂತರ ಹಣ ಕಲೆಕ್ಟ್ ಮಾಡಿ ಯಾವುದೇ ಸಹಾಯ ಮಾಡದೇ ವಂಚಿಸಿ ಹಣ ಮಾಡುತ್ತಿದ್ಧಾರೆ.. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ದೂರುದಾರ ಬಸವರಾಜ್ ಘೋಷಲ್ ದೂರು ನೀಡಿದ್ದಾರೆ.. ಸದ್ಯ ಈ ಸಂಬಂಧ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ತನಿಖೆಯ ನಂತರವೇ ಆಸಲಿ ವಿಚಾರ ಬೆಳಕಿಗೆ ಬರಬೇಕಿದೆ.