ಬೆಂಗಳೂರು: ಸಾರ್ವಜನಿಕರಿಗೆ ಸಂಶಯ ಬಾರದಂತೆ ಬೇಗ ಒಂದು ತನಿಖೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಸಂತೋಷ್ ಆತ್ಮಹತ್ಯೆ ಹಿನ್ನೆಲೆ ಬೇರೆ ಬೇರೆ ಇದೆ ಎನ್ನಲಾಗುತ್ತಿದೆ. ಸರ್ಕಾರ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಬೇಕು. ಸತ್ಯಾಸತ್ಯತೆ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ, ಸಂತೋಷ್ ತಪ್ಪು ಮಾಡಿರೋದು : ಈಶ್ವರಪ್ಪ
Advertisement
Advertisement
ಈಶ್ವರಪ್ಪ ರಾಜೀನಾಮೆ ಅಮೇಲೆ, ಮೊದಲು ತನಿಖೆ ಆಗಲಿ. ಆಡಳಿತ ಇದ್ದಾಗ ಒಂಥರಾ ಮಾತಾಡ್ತೀವಿ, ವಿರೋಧ ಪಕ್ಷದಲ್ಲಿ ಇದ್ದಾಗ ಬೇರೆ ತರಹ ಮಾತಾಡ್ತೀವಿ. ಸಾರ್ವಜನಿಕರಿಗೆ ಸಂಶಯ ಬಾರದ ಹಾಗೇ ಬೇಗ ಒಂದು ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Advertisement
Advertisement
ಯಾವುದೇ ಮಂತ್ರಿ ನೈತಿಕತೆ ಬಂದಾಗ ಅವರೇ ತೀರ್ಮಾನ ತೆಗೆದುಕೊಳ್ಳಬೇಕು. ಅದು ಅವರ ನೈತಿಕ ಹೊಣೆಗಾರಿಕೆ ಪ್ರಶ್ನೆ. ನಾವು ಫೋರ್ಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲಿದೆ ನೈತಿಕತೆ, ಮೂರು ಪಾರ್ಟಿ ಅಲ್ಲಿಗೇ ಬಂದು ನಿಂತಿವೆ. 10% ನವರು ಈಗ ಯಾಕೆ 40% ತಗೋತಾರೆ ಅಂತಾ ಕೇಳುತ್ತಾರೆ. 40% ತಗೊಂಡವರು ನೀವು ತಗೊಂಡಿಲ್ಲವಾ ಅಂತಾರೆ. ಏನ್ ವಿಪರ್ಯಾಸ ಎಂದು ನಕ್ಕು ವಿಶ್ವನಾಥ್ ಅಲ್ಲಿಂದ ಹೊರಟರು.