ಚಿಕ್ಕಬಳ್ಳಾಪುರ: ಶಂಕಿತ ಡೆಂಗ್ಯೂಗೆ (Suspected Dengue) 18 ವರ್ಷದ ಯುವತಿ (Young Woman) ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ನಡೆದಿದೆ.
ಯಶಸ್ವಿನಿ (18) ಮೃತ ಯುವತಿ. ಕಳೆದ ಒಂದು ವಾರದಿಂದ ತೀವ್ರತರನಾದ ಜ್ವರದಿಂದ ಬಳಲುತ್ತಿದ್ದ ಯಶಸ್ವಿನಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯಶಸ್ವಿನಿ ಮೃತಪಟ್ಟಿದ್ದಾಳೆ. ದ್ವಿತೀಯ ಪಿಯುಸಿಯಲ್ಲಿ 95% ಅಂಕ ಗಳಿಸಿದ್ದ ಯಶಸ್ವಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇದನ್ನೂ ಓದಿ: ರಾಮನಗರ ಹೆಸರು ಮರುನಾಮಕರಣಕ್ಕೆ ಜೆಡಿಎಸ್ ವಿರೋಧ ಇಲ್ಲ, ಹಾಸನದವರ ವಿರೋಧ ಇದೆ: ಹೆಚ್‌ಸಿ ಬಾಲಕೃಷ್ಣ
Advertisement
Advertisement
ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 400ಕ್ಕೂ ಹೆಚ್ಚು ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ 437 ಡೆಂಗ್ಯೂ ಕೇಸ್ ದಾಖಲಾಗಿತ್ತು. ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಕೇಸ್ 8,658ಕ್ಕೆ ಏರಿಕೆಯಾಗಿದೆ. ಶುಕ್ರವಾರದವರೆಗೆ ಡೆಂಗ್ಯೂಗೆ ಏಳು ಜನರು ಬಲಿಯಾಗಿದ್ದು, ಇದು ಎಂಟನೇ ಬಲಿಯಾಗಿದೆ. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್ ಮಾಡಿದ್ರು: ಹೆಚ್‌ಡಿಕೆ ಕಿಡಿ
Advertisement