ಮುಂಬೈ: ಅಮೈರಾ ದಸ್ತೂರ್… ಯಾರಿದು ಎಂದು ನೀವು ಬೆರಗಾದರೆ ಅದಕ್ಕಿರೋ ಉತ್ತರ ಇದು. ಈ ಬೆಡಗಿ ಕ್ಲೀನ್ ಅಂಡ್ ಕ್ಲಿಯರ್, ಡವ್, ಏರ್ ಟೆಲ್, ಮೈಕ್ರೋಮ್ಯಾಕ್ಸ್ ಮುಂತಾದ ಜಾಹೀರಾತುಗಳಲ್ಲಿ ಮಿಂಚಿದ್ದಾಳೆ. ಮನೀಶ್ ತಿವಾರಿ ನಿರ್ದೇಶಿಸಿದ ‘ಇಸ್ಸಾಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅಮೈರಾ ದಸ್ತೂರ್ 2018ರ ರೈಸಿಂಗ್ ಸ್ಟಾರ್ ಎಂದರೆ ಅದು ಅತಿಶಯೋಕ್ತಿ ಅಲ್ಲ…!
ಪ್ರತೀಕ್ ಬಬ್ಬರ್ ನ ನಾಯಕಿಯಾಗಿ ಕಾಣಿಸಿಕೊಂಡ ಅಮೈರಾ ಸದ್ಯ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ಸಖತ್ ಬ್ಯುಸಿ. 2017ರಲ್ಲಿ ತಮಿಳಿನ ಊದಿ ಊದಿ ಉಳೈಕಾಣುಂನಲ್ಲಿ ಮಿಂಚಿದ ಈ ಸ್ನಿಗ್ಧ ಸುಂದರಿ, ಜಾಕಿಚಾನ್ ರ ಕುಂಗ್‍ಫು ಯೋಗದಲ್ಲಿ ಪಾತ್ರ ಗಿಟ್ಟಿಸುವಂತಾಗಿದ್ದು, ಮಹತ್ ಸಾಧನೆ!
Advertisement
Advertisement
2018ರಲ್ಲಿ ತೆಲುಗಿನ ಮನಸುಕು ನಚ್ಚಿಂದಿ ಹಾಗೂ ರಾಜುಗಾಡು ಬಿಡುಗಡೆಯಾಗಿದ್ದು, 2018ರ ಉತ್ತರಾರ್ಧದಲ್ಲಿ ಹಿಂದಿಯ ರಜ್ಮಾಚಾವಲ್ ಹಾಗೂ ಪ್ರಸ್ಥಾ ನಂ ಬಿಡುಗಡೆಯಾಗುವ ನಿರೀಕ್ಷೆಯಿದೆ. ತನ್ನ ಲುಕ್ ನಿಂದ ಸದಾ ಗಮನ ಸೆಳೆಯುವ ಅಮೈರಾ ರಜ್ಮಾಚಾವಲ್ ಚಿತ್ರದಲ್ಲಿ ವಿಭಿನ್ನ ಸೈಡ್ ಶೇವ್ ಹೇರ್ ಸ್ಟೈಲ್ ಮಾಡಿಸಿದ್ದು, ಸಖತ್ ಕುತೂಹಲ ಹುಟ್ಟಿಸಿದೆ. ಎಷಿ ಕಪೂರ್ ನಿರ್ಮಾಣದ ಈ ಚಿತ್ರದಲ್ಲಿ ಅಮೈರಾ ಎದುರು ಅನಿರುದ್ಧ್ ತನ್ವೀರ್ ನಟಿಸಿದ್ದು, ಅಮೈರಾ ಮೀರತ್ ನ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳ ಪಾತ್ರ ನಿಭಾಯಿಸಲಿದ್ದಾಳೆ. ಮಾಡರ್ನ್ ಬೇಬ್ ಅಮೈರಾ ಈ ರೋಲ್‍ಗಾಗಿ ಆಕ್ಟಿಂಗ್ ಕ್ಲಾಸ್ ತರಬೇತಿ ಪಡೆಯುತ್ತಿದ್ದಾಳೆ. ದೇವ್ ಕಟ್ಟಾ ನಿರ್ದೇಶಿಸಿದ್ದ ತೆಲುಗಿನ ಪ್ರಸ್ಥಾನಂನ ಹಿಂದಿ ರೀಮೇಕ್‍ನ ಹೀರೋಯಿನ್ ಆಗಿಯೂ ಈಕೆ ನಟಿಸುತ್ತಿದ್ದಾಳೆ. ಮಾನ್ಯತಾ ದತ್ ನಿರ್ಮಾಣದ ಪ್ರಸ್ಥಾನಂನಲ್ಲಿ ಅಮೈರಾ ಜೊತೆ ಸಂಜಯ್ ದತ್, ಜಾಕಿ ಶ್ರಾಫ್, ಅಲಿ ಫಜಲ್, ಮನೀಷಾ ಕೊಯಿರಾಲ ತೆರೆ ಹಂಚಿಕೊಂಡಿದ್ದಾರೆ.
Advertisement
ಅಮೈರಾ ದಸ್ತೂರ್ ಮಾಡರ್ನ್ ಹಾಗೂ ಓಪನ್ ಪಾತ್ರಗಳಿಗೆ ಒಗ್ಗಿಕೊಂಡಿದ್ದು, ಈಗ ಪ್ರಯೋಗಶೀಲ ನಿರ್ದೇಶಕರ ಕೈಯಲ್ಲಿ ಅರಳು ಮಲ್ಲಿಗೆಯಾಗುವ ಪ್ರಯತ್ನಕ್ಕೆ ಭೇಷ್ ಎನ್ನಬೇಕು.
Advertisement