ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಬ್ಯೂಟಿ ಅಮೂಲ್ಯ (Amulya) ಅವರು ವೆಕೇಷನ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಮಲೆನಾಡು ಚಿಕ್ಕಮಗಳೂರಿನಲ್ಲಿ ಅಮೂಲ್ಯ ಕುಟುಂಬ ತೆರಳಿದ್ದು, ಪತಿ ಮತ್ತು ಮಕ್ಕಳ ಜೊತೆಗಿನ ಸುಂದರ ಫೋಟೋವನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಎಲ್ಲವೂ ಗಾಸಿಪ್ : ಐಶ್ವರ್ಯ 2ನೇ ಮದುವೆ, ಅಪ್ಪನೊಂದಿಗೆ ಮುನಿಸು
‘ಚೆಲುವಿನ ಚಿತ್ತಾರ’ (Chevina Chittara) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ಅಮೂಲ್ಯ ಅವರು ಮಳೆ, ಗಜಕೇಸರಿ, ರಾಮ್ ಲೀಲಾ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅಮೂಲ್ಯಗೆ ಡಿಮ್ಯಾಂಡ್ ಇರುವಾಗಲೇ ಜಗದೀಶ್ ಅವರನ್ನು ನಟಿ ಮದುವೆಯಾದರು. ಈಗ ಇಬ್ಬರು ಅವಳಿ ಮಕ್ಕಳ ಆರೈಕೆಯಲ್ಲಿ ನಟಿ ಬ್ಯುಸಿಯಿದ್ದಾರೆ.
- Advertisement
- Advertisement
ಇತ್ತೀಚಿಗೆ ನಟಿ ಅಮೂಲ್ಯ ಫ್ಯಾಮಿಲಿ ಮತ್ತು ತನ್ನ ಬೆಸ್ಟ್ ಫ್ರೆಂಡ್ ಜೊತೆ ಚಿಕ್ಕಮಗಳೂರಿಗೆ ಹೋಗಿ ಬಂದಿದ್ದಾರೆ. ಸುಂದರ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಬ್ಯೂಟಿಫುಲ್ ಜಾಗವೊಂದರಲ್ಲಿ ಅಮ್ಮು ಫ್ಯಾಮಿಲಿ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಮಕ್ಕಳು ಜೊತೆಗಿದ್ದು, ‘ಸೀತಾರಾಮ’ (Seetharama) ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಅಮೂಲ್ಯ ಜೊತೆ ಫೋಟೋ ಪೋಸ್ ಕೊಟ್ಟಿದ್ದಾರೆ.
ಅಮೂಲ್ಯ ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ರೆ, ವೈಷ್ಣವಿ ಲೈಟ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ‘ಸೀತಾರಾಮ’ ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಅಮೂಲ್ಯ ಕಮ್‌ಬ್ಯಾಕ್ ಅಭಿಮಾನಿಗಳು ಎದುರು ನೋಡ್ತಿದ್ದಾರೆ.