ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ ಪ್ರವೇಶ ಮಾಡಿದ್ದಾರೆ. ಗೆಸ್ಟ್ ರೀತಿಯಲ್ಲಿ ಮಂಜು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದಾರೆ.
ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್ ಗುರೂಜಿ
ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ.
ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.