ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶದ್ರೋಹಿ ಅಮೂಲ್ಯ ಹಿನ್ನೆಲೆ ಕುರಿತು ಸಂಪೂರ್ಣ ತನಿಖೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ದೇಶದ್ರೋಹಿಗಳನ್ನ ಸಹಿಸೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಅಮೂಲ್ಯ ಲಿಯೋನ್ ಳನ್ನ ಬಂಧನ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿದೆ. ಪ್ರಕರಣದ ತನಿಖೆ ಆಗ್ತಿದೆ. ಆಕೆ ಸಂಪೂರ್ಣ ಇತಿಹಾಸ ಶೋಧ ಮಾಡ್ತೀವಿ. ಆಕೆಯ ಹಿನ್ನೆಲೆ ಬಗ್ಗೆ ಸಂಪೂರ್ಣ ತನಿಖೆ ಆಗುತ್ತೆ ಅಂತ ತಿಳಿಸಿದ್ರು. ನ್ಯಾಯಾಂಗ ಬಂಧನದಲ್ಲಿದ್ದರು ಆಕೆಯನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡ್ತೀವಿ ಅಂತ ಸ್ಪಷ್ಟಪಡಿಸಿದರು.
ಇನ್ನು ಆಯೋಜಕರು ಆಕೆಯನ್ನ ಕಾರ್ಯಕ್ರಮಕ್ಕೆ ಕರೆದ್ರಾ? ಅನ್ನೋದನ್ನ ತನಿಖೆ ಮಾಡುತ್ತೇವೆ. ಮೇಲ್ನೋಟಕ್ಕೆ ಆಕೆ ಗೆಸ್ಟ್ ರೀತಿ ಬಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ ಅನ್ನಿಸುತ್ತಿದೆ. ಹೀಗಾಗಿ ಆಯೋಜಕರಿಗೆ ನೋಟಿಸ್ ಕೊಟ್ಟು ತನಿಖೆ ಮಾಡಲಾಗುವುದು. ಎಡಪಂಥೀಯ ಚಿಂತಕರು ಸೇರಿದಂತೆ ಬೇರೆ ಚಿಂತಕರ ಕೈವಾಡದ ಬಗ್ಗೆ ಸಂಪೂರ್ಣ ತನಿಖೆ ಆಗಲಿದೆ. ಅಮೂಲ್ಯ ಗಡಿಪಾರು ವಿಚಾರದ ಬಗ್ಗೆ ಪರಿಶೀಲನೆ ಮಾಡಿಲ್ಲ. ನಮ್ಮಲ್ಲಿ ಬಿಗಿಯಾದ ಕಾನೂನುಗಳು ಇವೆ. ಈ ಕಾನೂನಿನ ಅನ್ವಯವೇ ಪ್ರಬಲವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬೊಮ್ಮಾಯಿ, ಸಿದ್ದರಾಮಯ್ಯ ನಮ್ಮ ಸರ್ಕಾರ ಪ್ರತಿಭಟನೆ ಮಾಡೋ ಹಕ್ಕು ಹತ್ತಿಕ್ಕುತ್ತಿದ್ದೇವೆ ಅಂತ ಮಾತಾಡಿದ್ದರು. ಮೂಲಭೂತ ಹಕ್ಕು ಕಸಿಯುತ್ತೀರಾ ಅಂತ ಹೇಳಿದ್ರು. ಸಿದ್ದರಾಮಯ್ಯ ಸಿಎಂ ಆದಾಗ ರಾಯಚೂರಲ್ಲಿ ಓವೈಸಿ ಬರಲು ಅವಕಾಶ ಕೊಡಲಿಲ್ಲ. ಆದ್ರೆ ನಾವು ಅವಕಾಶ ಕೊಟ್ಟಿದ್ದೇವೆ. ನಾವು ಯಾರ ಮೂಲಭೂತ ಹಕ್ಕು ಕಸಿದಿಲ್ಲ. ಅವರಿಗೆ ಬೇಕಾದಂತೆ ಮಾತಾಡೋದು ಸರಿಯಲ್ಲ ಅಂತ ತಿರುಗೇಟು ಕೊಟ್ಟರು.