ಕಿರುತೆರೆಯ ಜನಪ್ರಿಯ ಅಮೃತಧಾರೆ (Amruthadaare) ಮತ್ತು ಭಾಗ್ಯಲಕ್ಷಿ (Bhagyalakshmi) ಸೀರಿಯಲ್ ನಟಿಯರು ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಒಟ್ಟಿಗೆ ಗೋವಾಗೆ ಜಾಲಿ ಟ್ರಿಪ್ ಮಾಡ್ತಿದ್ದಾರೆ. ಶ್ರೇಷ್ಠಾ ಮತ್ತು ಮಹಿಮಾ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ
ಕನ್ನಡತಿ, ನಮ್ಮ ಲಚ್ಚಿ ಸೀರಿಯಲ್ ಮೂಲಕ ಗಮನ ಸೆಳೆದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ (Sara Annaiah) ಅವರು ಸದ್ಯ ಅಮೃತಧಾರೆ ಸೀರಿಯಲ್‌ನ ಮಹಿಮಾ ರೋಲ್‌ನಲ್ಲಿ ಮಿಂಚಿದ್ದಾರೆ. ಉದ್ಯಮಿ ಗೌತಮ್ ದಿವಾನ್ ಸಹೋದರಿ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ. ಜೀವಾ ಎಂಬ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸೋ ಹುಡುಗಿಯಾಗಿ ಸಾರಾ ಕಾಣಿಸಿಕೊಂಡಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್ ಒಳ್ಳೆಯ ಟಾಕ್‌ನಲ್ಲಿದೆ. ಸಖತ್ ಹೈಪ್ ಕ್ರಿಯೆಟ್ ಮಾಡಿದೆ.
ಸಾರಾ ಅವರ ಫ್ರೆಂಡ್ ಕಾವ್ಯಾ ಗೌಡ (Kavya Gowda) , ಕೂಡ ಶ್ರೇಷ್ಠಾ ಎಂಬ ಪಾತ್ರದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಮಿಂಚ್ತಿದ್ದಾರೆ. ಮದುವೆಯಾಗಿರುವ ಹೀರೋ ತಾಂಡವ್ ಹಿಂದೆ ಬೀಳುವ ಯುವತಿಯಾಗಿ ಕಾವ್ಯಾ ಕಾಣಿಸಿಕೊಂಡಿದ್ದಾರೆ.
ಬಡವ ರಾಸ್ಕಲ್ (Badava Rascal) ನಟಿ ಅಮೃತಾ ಐಯ್ಯಂಗಾರ್ ಅವರ ಸ್ನೇಹಿತೆ ಈ ಕಾವ್ಯಾ ಗೌಡ. ಅಲ್ಲದೇ ರಿಂಗಾ ರಿಂಗಾ ರೋಸಸ್ ಸಿನಿಮಾದಲ್ಲೂ ಕಾವ್ಯ ನಟಿಸಿದ್ದಾರೆ. ಮತ್ತಷ್ಟು ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದಾರೆ. ಕಾವ್ಯಾ ಗೌಡ ಅವರು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಾರಾ ಅಣ್ಣಯ್ಯ- ಕಾವ್ಯಾ ಗೌಡ ಅವರು ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರು ಸೀರಿಯಲ್, ಸಿನಿಮಾ ಅಂತಾ ಬ್ಯುಸಿಯಿದ್ದರು. ಈಗ ಶೂಟಿಂಗ್ ಬ್ರೇಕ್ ಹಾಕಿ ಗೋವಾಗೆ ಹಾರಿದ್ದಾರೆ. ಅಲ್ಲಿ ಬೋಲ್ಡ್ ಲುಕ್‌ನಲ್ಲಿ ಸಾರಾ- ಕಾವ್ಯಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಬ್ಬರ ಫೋಟೋ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದೆ.