ಬೆಂಗಳೂರು: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರೊಂದು ಹೇಳಿಕೆ ನಿಡಿದ್ದು, ಇದೀಗ ಅವರ ಹೇಳಿಕೆಗೆ ಹಲವಾರು ರೀತಿಯ ಮೀಮ್ಸ್ ಗಳು ಹುಟ್ಟಿಕೊಂಡಿವೆ.
ಅಮೃತಾ ಅವರು ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಟ್ರಾಫಿಕ್ ನಿಂದ ನಿಮ್ಮ ಕುಟುಂಬಗಳಿಗೆ ನಿಮಗೆ ಸಮಯ ಕೊಡಲು ಅಸಾಧ್ಯವಾಗುತ್ತೆ. ಹೀಗಾಗಿ ವಿಚ್ಛೇದನಕ್ಕೆ ಇದೂ ಒಂದು ಕಾರಣವಾಗುತ್ತೆ ಎಂದು ಹೇಳಿದ್ದರು. ಅಮೃತಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಅಮೃತಾ ಹೇಳಿಕೆಗೆ ನೆಟ್ಟಿಗರು ಕೂಡ ವ್ಯಂಗ್ಯವಾಡಿದ್ದು, ಹಲವಾರು ರೀತಿಯ ಮೀಮ್ಸ್ ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
#WATCH: BJP leader Devendra Fadnavis' wife Amruta Fadnavis says, "I'm saying this as common citizen. Once I go out I see several issues incl potholes,traffic. Due to traffic,people are unable to give time to their families & 3% divorces in Mumbai are happening due to it." (04.02) pic.twitter.com/p5Nne5gaV5
— ANI (@ANI) February 5, 2022
Advertisement
ಸಾಮಾನ್ಯವಾಗಿ ಸಡನ್ ಆಗಿ ಪತಿ ಅಥವಾ ಪತ್ನಿ ಮನೆಗೆ ಬಂದಾಗ ಎಷ್ಟೋ ಅಕ್ರಮ ಸಂಬಂಧಗಳು ಬಯಲಾಗಿ, ಡಿವೋರ್ಸ್ ಆಗಿರುವ ಬಗ್ಗೆ ಕೆಲವೊಂದು ಸ್ಟೋರಿಗಳನ್ನು ಓದಿದ್ದೇನೆ. ಹೀಗಾಗಿ ನೀವು ಉತ್ತಮ ಟ್ರಾಫಿಕ್ ಅನ್ನು ದೂಷಿಸಬೇಕೋ ಹೊರತು ಟ್ರಾಫಿಕ್ ಜಾಮ್ ಅಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್ಲಾಲ್ ನೆಹರೂ
Advertisement
Bangaloreans who are stuck in traffic everyday right now ???????? pic.twitter.com/Tmb7iLmCCs
— That Nair Guy (@surajv369) February 5, 2022
ಇನ್ನೊಬ್ಬರು, ವಾವ್..! ಈಗ ಮುಂಬೈನಲ್ಲಿ ಆಗಿರುವ ಒಟ್ಟು ಡಿವೋರ್ಸ್ ಗಳಲ್ಲಿ ಶೇ.3ರಷ್ಟು ಪ್ರಕರಣಕ್ಕೆ ಟ್ರಾಫಿಕ್ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾದರೆ ಬೆಂಗಳೂರು, ಕೋಲ್ಕತ್ತಾ ಮಂದಿಯ ಕಥೆ ಏನಾಗಬೇಡ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ಇದರಿಂದ ವಿಚ್ಛೇದನಗಳಾಗೋದಾದ್ರೆ ಅದಕ್ಕೆ ಟ್ರಾಫಿಕ್ ವಿಚ್ಛೇದನ ಅಥವಾ ಜಾಮ್ ವಿಚ್ಛೇದನ ಅಂತ ಕರೆಯಬಹುದೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!
Advertisement
By this logic, Bangalore shld have already become a a 'single' city https://t.co/VR8JVT0Sdo
— Sharan Poovanna (@sharanpoovanna) February 6, 2022
ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂಬುದು ತುಂಬಾ ಆಸಕ್ತಿದಾಯಕ ವಿಚಾರವಾಗಿದೆ. ಒಂದು ವೇಳೆ ಟ್ರಾಫಿಕ್ ಕಾರಣವೆಂದಾದರೆ ಬೆಂಗಳೂರಿನಲ್ಲಿ ಶೆ.10 ರಷ್ಟು ವಿಚ್ಛೇದನಗಳಾಗಬಹುದು ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಅಲ್ಲದೆ ಅನಿಲಬ್ ಸಿಂಗ್ ಎಂಬವರು, ಟ್ರಾಫಿಕ್ ಕಾರಣವೆಂದಾದರೆ ಸದ್ಯ ಬೆಂಗಳೂರಿನ ಪ್ರತಿಯೊಬ್ಬರು ಇಷ್ಟೊತ್ತಿಗೆ ಸಿಂಗಲ್ ಆಗಿ ಇರುತ್ತಿದ್ದರು ಎಂದಿದ್ದಾರೆ.
Few moments later https://t.co/znalW7w12C pic.twitter.com/YL9IbSQalh
— Rofl Democrazy (@FakirHu) February 5, 2022
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅಮೃತಾ, ನಾನು ಮಾಜಿ ಸಿಎಂ ಪತ್ನಿಯಾಗಿ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕಳಾಗಿ ಹೇಳುತ್ತಿದ್ದೇನೆ. ನಾನು ಒಮ್ಮೆ ಹೊರಗೆ ಹೋದಾಗ ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೇನೆ. ಟ್ರಾಫಿಕ್ ನಿಂದ ಜನ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಗಳು ಟ್ರಾಫಿಕ್ ಸಮಸ್ಯೆಯಿಂದಲೇ ಉಂಟಾಗುತ್ತಿವೆ ಎಂದು ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಅಮೃತಾ ಫಡ್ನವೀಸ್ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
https://twitter.com/codenamedeb/status/1489961471203151873