ಸ್ಯಾಂಡಲ್‌ವುಡ್‌ನ (Sandalwood) ಸೂಪರ್ ಹಿಟ್ ಜೋಡಿ ಡಾಲಿ- ಅಮೃತಾ ನಟನೆಯ `ಹೊಯ್ಸಳ’ (Hoysala) ಸಿನಿಮಾ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಸದ್ಯ ಪ್ರಚಾ ಕಾರ್ಯದಲ್ಲಿ ಬ್ಯುಸಿಯಿರುವ ಚೆಂದುಳ್ಳಿ ಚೆಲುವೆ ಅಮೃತಾ ಸಂದರ್ಶನವೊಂದರಲ್ಲಿ ಡಾಲಿ ಬಗ್ಗೆ ಅಚ್ಚರಿಯ ಮಾಹಿತಿವೊಂದನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್
View this post on Instagram
`ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ನಂತರ `ಹೊಯ್ಸಳ’ ಚಿತ್ರದ ಮೂಲಕ ಡಾಲಿ- ಅಮೃತಾ (Amrutha Iyengar) ಮತ್ತೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ತೆರೆಯ ಮೇಲೆ ಬೆಸ್ಟ್ ಕಪಲ್ ಆಗಿ ಕಾಣಿಸಿಕೊಂಡಿರುವ ಈ ಜೋಡಿ ನಡುವೆ ತೆರೆಯ ಹಿಂದೆ ಲವ್ ಸ್ಟೋರಿ ನಡೆಯುತ್ತಿದೆ ಎಂದೇ ಅದೆಷ್ಟೋ ಮಂದಿ ಭಾವಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ನಟ ಗಣೇಶ್ ನಿರೂಪಣೆಯ Golden Gang ಶೋನಲ್ಲಿ ಡಾಲಿ ಕೈಯಲ್ಲಿ ಅಮೃತಾಗೆ ಪ್ರಪೋಸ್ ಮಾಡಿಸಿದ್ದರು. ಡಾಲಿ(Daali) ಪ್ರೇಮ ನಿವೇದನೆ ಮಾಡಿದ ರೀತಿ ಪ್ರೇಕ್ಷಕರಿಗೆ ಹಿಡಿಸಿತ್ತು. ರೀಲ್ ಸ್ಟೋರಿಗಳ ಮಧ್ಯೆ ರಿಯಲ್ ಲವ್ ಕಥೆ ಇದೆ ಎಂದೇ ಫ್ಯಾನ್ಸ್ ಅಂದಾಜಿಸಿದ್ದಾರೆ. ಈ ಬಗ್ಗೆ ನಟಿ ಅಮೃತಾ ಕೂಡ ಸಂದರ್ಶನವೊಂದರಲ್ಲಿ ಸ್ಟಷ್ಟನೆ ನೀಡಿದ್ದಾರೆ.
ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್‌ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು ಎಂದು ನಟಿ ಹೇಳಿದ್ದಾರೆ. ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್‌ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಅಮೃತಾ ಸಂದರ್ಶನದಲ್ಲಿ ರೀವೀಲ್ ಮಾಡಿದ್ದಾರೆ.
ಇನ್ನೂ ಇದೇ ಮಾರ್ಚ್ 30ಕ್ಕೆ `ಹೊಯ್ಸಳ’ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಈ ಹಿಂದೆ `ಬಡವ ರಾಸ್ಕಲ್’ ಮೂಲಕ ಡಾಲಿ-ಅಮೃತಾ ಜೋಡಿ ಕಮಾಲ್ ಮಾಡಿದಂತೆ ಈ ಬಾರಿಯೂ ಸೌಂಡ್ ಮಾಡುತ್ತಾ ಎಂಬುದನ್ನ ಕಾದುನೋಡಬೇಕಿದೆ.