ಕಿರುತೆರೆಯ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಇದೀಗ ಈ ಜೋಡಿಯ ಮದುವೆಯ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ.
ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದುದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಗೋಲ್ಡನ್ ಬಣ್ಣದ ಸೀರೆಯಲ್ಲಿ ನಟಿ ಅಕ್ಷತಾ ಮಿಂಚಿದ್ದಾರೆ.
ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷತಾ ಅವರ ಮದುವೆಯಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.