ಬೆಟ್ಟದ ನೆಲ್ಲಿಕಾಯಿ (Amla) ತಿನ್ನಲು ಹುಳಿಯಾಗಿದ್ದರೂ, ಇದು ದೇಹದ ಆರೋಗ್ಯಕ್ಕೆ ಬಹುಮುಖ್ಯವಾಗಿದೆ. ಇದರಲ್ಲಿ ಖನಿಜಗಳು ಮತ್ತು ವಿಟಮಿನ್ ಹೇರಳವಾಗಿದ್ದು, ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ಚಳಿಗಾಲದ (Winters) ಸಮಯದಲ್ಲಿ ನಮ್ಮನ್ನು ಆರೋಗ್ಯದಿಂದಿಡಲು (Health) ಸಹಾಯ ಮಾಡುತ್ತದೆ.
ತೂಕ ಇಳಿಕೆ: ಅಧಿಕ ತೂಕದಿಂದಾಗಿ ಬಳಲುತ್ತಿರುವವರು ಚಳಿಗಾಲದ ಸಮಯದಲ್ಲಿ ಸಿಗುವ ಸಮೃದ್ಧ ಹಾಗೂ ರುಚಿಕರವಾದ ನೆಲ್ಲಿಕಾಯಿಯನ್ನು ತಿನ್ನುಬೇಕು. ಇದು ದೇಹಕ್ಕೂ ಒಳ್ಳೆಯದು ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ.
Advertisement
Advertisement
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕೊರೊನಾದಂತಹ ಅನೇಕ ಸೋಂಕುಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಇಮ್ಯುನಿಟಿ ಪವರ್ ಬೇಕಾಗುತ್ತದೆ. ಇದಕ್ಕೆ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಿ. ಇದರಲ್ಲಿ ರೋಗನಿರೋಧಕ ಅಂಶಗಳು ಹಾಗೂ ವಿಟಮಿನ್ ಸಿ ಹೇರಳವಾಗಿದೆ. ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Advertisement
ಹೃದಯದ ಆರೋಗ್ಯ: ನೆಲ್ಲಿಕಾಯಿಯಲ್ಲಿರುವ ಅಮೈನೋ ಆಮ್ಲಗಳು ಮತ್ತು ಆ್ಯಂಟಿ – ಆಕ್ಸಿಡೆಂಟ್ ಅಂಶಗಳು ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಇದರಿಂದಾಗಿ ನೆಲ್ಲಿಕಾಯಿ ತಿನ್ನುವುದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.
Advertisement
ಜೀರ್ಣಕ್ರಿಯೆಗೆ ಸಹಾಯ: ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಅನೇಕರಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಕೆಲವರಲ್ಲಿ ಮಲಬದ್ಧತೆಯ ಸಮಸ್ಯೆಯು ಕಾಡುತ್ತದೆ, ಆದರೆ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಅಜೀರ್ಣ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.
ಮಧುಮೇಹವನ್ನು ನಿಯಂತ್ರಣ: ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾದರೆ ಅದರಿಂದ ನಿಮ್ಮ ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಆಮ್ಲ ಹೆಚ್ಚಾಗಿರುವುದೆ. ಇದರಿಂದ ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಮಧಮೇಹವನ್ನು ನಿಯಂತ್ರಿಸಬಹುದು. ಇದನ್ನೂ ಓದಿ: ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ
ಕೂದಲು ಉದುರುವುದಕ್ಕೆ ಪರಿಹಾರ: ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಈ ಕೂದಲು ಉದುರಲು ಟೆನ್ಶನ್, ನೀರು, ಆಹಾರ ಹೀಗೆ ಹಲವಾರು ಸಮಸ್ಯೆಗಳಿವೆ, ಆದರೆ ನೆಲ್ಲಿಕಾಯಿಯಲ್ಲಿರುವ ಆಮ್ಲ ಹಾಗೂ ಪ್ರೋಟಿನ್ ಅಂಶಗಳಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ಇದನ್ನೂ ಓದಿ: ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k