ಬೆಂಗಳೂರು/ನೆಲಮಂಗಲ: ವ್ಯಕ್ತಿಯೊಬ್ಬರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ಐಷಾರಾಮಿ ಕಾರನ್ನು ವಶಪಡಿಸಿಕೊಂಡಿದ್ದ ಆರ್‌ಟಿಓ ಅಧಿಕಾರಿಗಳು ಇದೀಗ ರಿಲೀಸ್ ಮಾಡಿದ್ದಾರೆ.
Advertisement
ಬೇರೆ ರಾಜ್ಯದ ಕಾರುಗಳು ತೆರಿಗೆ ವಂಚಿಸಿ ಕರ್ನಾಟಕ ರಾಜ್ಯದಲ್ಲಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನ ಸ್ಪೆಷಲ್ ತಂಡದ ಆರ್‌ಟಿಓ ಅಧಿಕಾರಿಗಳು ನಗರದ ಯುಬಿ ಸಿಟಿ ಹಾಗೂ ಇನ್ನಿತರ ಕಡೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಬು ಎಂಬವರು ಅಮಿತಾಭ್ ಬಚ್ಚನ್ ಬಳಿ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಸದ್ಯ ಆರ್‌ಟಿಓ ಅಧಿಕಾರಿಳಿಗೆ ಈ ಕಾರಿನ ದಾಖಲೆಗಳನ್ನು ನೀಡಿ ತೆರಿಗೆ ಕಟ್ಟಿ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ:ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ: ಅಮಿತಾಭ್ ಬಚ್ಚನ್
Advertisement
Advertisement
ಅಮಿತಾಭ್ ಬಚ್ಚನ್ ಅವರಿಗೆ 1.5 ಕೋಟಿ ರೂಪಾಯಿಯನ್ನು ಆರ್‌ಟಿಜಿಎಸ್ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ ಟ್ಯಾಕ್ಸ್ ಕಟ್ಟಲಾಗಿದೆ. ಬಚ್ಚನ್‍ರಿಂದ ಕಾರು ಖರೀದಿ ಮಾಡಿದ ನಂತರವೂ ದಾಖಲೆಗಳನ್ನು ಬದಲಾಯಿಸದೇ ಕಾರಿನ ಇನ್ಶೂರೆನ್ಸ್ ನನ್ನು ಅಮಿತಾಭ್ ಹೆಸರಲ್ಲಿ ಈಗ ಕಟ್ಟಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಕಾರು ಯಾವಾಗ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿದೆ ಎನ್ನುವುದರ ಬಗ್ಗೆ ಆರ್‌ಟಿಓ ಅಧಿಕಾರಿಗಳ ಬಳಿ ದಾಖಲೆ ಇಲ್ಲ. ಮೊನ್ನೆ ವಶಪಡಿಸಿಕೊಂಡ ಪಾಂಡಿಚೇರಿ ರಿಜಿಸ್ಟ್ರೇಷನ್‍ನ ಕಾರಿಗೆ 35 ಲಕ್ಷ ತೆರಿಗೆ ಕಟ್ಟಿಸಲಾಗಿದೆ. ಇದನ್ನೂ ಓದಿ:ನಟ ಅಮಿತಾಭ್ ಬಚ್ಚನ್ ಕಾರು ವಶಕ್ಕೆ
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯಮಿ ಬಾಬು, ನನ್ನದು ಮುಂಬೈನಲ್ಲಿ ಬ್ಯುಸಿನೆಸ್ ಇದೆ ಹಾಗಾಗಿ ಅಲ್ಲೇ ಈ ಕಾರು ಓಡಿಸುತ್ತಿದ್ದೆ. ಈಗ ಬೆಂಗಳೂರಿಗೆ ಬಂದಿದ್ದೇನೆ, ಕೆಲ ದಾಖಲೆಗಳು ನೋಡಿಕೊಂಡಿಲ್ಲ. ಹಾಗಾಗಿ ಈ ರೀತಿಯ ಯಡವಟ್ಟು ಆಗಿದೆ. ಆದಷ್ಟು ಬೇಗ ನಿಯಮದಂತೆ ದಂಡ ಕಟ್ಟಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಆರ್ ಟಿಓ ಅಧಿಕಾರಿಗಳ ಪ್ರಕಾರ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಸಾಕಷ್ಟು ಜನ ರಾಜಕೀಯ ಮುಖಂಡರು, ಉದ್ಯಮಿಗಳು ಇದೇ ರೀತಿ ಟ್ಯಾಕ್ಸ್ ಕಟ್ಟದೇ, ಇನ್ಷುರೆನ್ಸ್ ಕಟ್ಟದೇ, ಒಂದೇ ಕಾರಿನ ನಂಬರ್‌ನಲ್ಲಿ ಬೇರೆ ಬೇರೆ ಕಾರುಗಳನ್ನು ಓಡಿಸುತ್ತಿರುವುದು ಗೊತ್ತಾಗಿದೆ. ಆದಷ್ಟು ಬೇಗ ಅಂಥವರ ಪಟ್ಟಿ ಮಾಡಿ ಎಲ್ಲರಿಗೂ ದಂಡ ಹಾಕಿ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.