ಮಂಡ್ಯ: ಇಂದಿನಿಂದ ಕೇಂದ್ರ ಗೃಹಸಚಿವ ಅಮಿತ್ ಶಾ (AmitShah) 3 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ (BJP) ಶಾ ಪ್ರವಾಸದಿಂದಲೇ ಚುನಾವಣಾ ರಣತಂತ್ರವನ್ನು ಆರಂಭಿಸಿದೆ. ಮಂಡ್ಯದಿಂದಲೇ ಅಮಿತ್ ಶಾ ಚುನಾವಣೆಗೆ ರಣಕಹಳೆ ಊದಲಿದ್ದಾರೆ.
Advertisement
ಚುನಾವಣೆ (Election) ಹೊಸ್ತಿಲಲ್ಲಿ ರಾಜ್ಯ ಬಿಜೆಪಿ ಮತಬೇಟೆ ಆರಂಭಿಸಿದೆ. ಇಂದಿನಿಂದ ಅಮಿತ್ ಶಾ ಮೂರು ದಿನಗಳ ಕಾಲ ರಾಜ್ಯಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಇಂದು ಬೆಂಗಳೂರಿಗೆ ಅಮಿತ್ ಶಾ ಬರಲಿದ್ದು, ನಾಳೆ ಸಕ್ಕರೆನಾಡಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ಬರೋಬ್ಬರಿ 1 ಲಕ್ಷ ಮಂದಿಯನ್ನು ಸೇರಿಸಿ ಚುನಾವಣಾ ಕಹಳೆ ಮೊಳಗಿಸಲು ವೇದಿಕೆ ಸಿದ್ಧವಾಗಿದೆ.
Advertisement
Advertisement
2018ರ ಚುನಾವಣೆ ವೇಳೆ ಬೂತ್ ಮಟ್ಟದ ಸಭೆ ನಡೆಸಿದ್ದ ಅಮಿತ್ ಶಾ 2023ರ ಚುನಾವಣೆಗೂ ಅದೇ ರೀತಿ ಬೂತ್ ಮಟ್ಟದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ನಾಳೆ ಮಂಡ್ಯಕ್ಕೆ ಭೇಟಿ ನೀಡಲಿರುವ ಶಾ ಮಂಡ್ಯದ ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ರ‍್ಯಾಲಿಯಲ್ಲಿ ಕಾಲ್ತುಳಿತ – ಎಂಟು ಮಂದಿ ಸಾವು
Advertisement
ಅಮಿತ್ ಶಾ ಕಾರ್ಯತಂತ್ರವೇನು….?: 2018ರ ಚುನಾವಣೆ ವೇಳೆ ಬೂತ್ ಮಟ್ಟದ ಸಭೆ ನಡೆಸಿದ್ದ ಅಮಿತ್ ಶಾ, ಕಾರ್ಯಕರ್ತರಿಗೆ 10 ಅಂಶಗಳ ಎಲೆಕ್ಷನ್ ಟಾಸ್ಕ್ ಕೊಟ್ಟಿದ್ದರು. 2023ರ ಚುನಾವಣೆಗೂ ರಣಕಹಳೆ ಊದಲಿದ್ದು, ಈ ಹಿನ್ನೆಲೆಯಲ್ಲಿ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ನಾಳೆ ಮಂಡ್ಯ ಜಿಲ್ಲೆಯಲ್ಲಿ ಪಕ್ಷದ ನಾಯಕರ ಮಹತ್ವದ ಸಭೆ ನಡೆಸಲಿದ್ದಾರೆ. ನಾಡಿದ್ದು ಬೆಂಗಳೂರಲ್ಲಿ ಬಿಜೆಪಿ ಬೂತ್ ಅಧ್ಯಕ್ಷರ ಜೊತೆ ಮೀಟಿಂಗ್ ನಡೆಸಲಿದ್ದು, ಈ ಬಾರಿಯೂ ಎಲೆಕ್ಷನ್ ಟಾಸ್ಕ್ ಕೊಡೋ ಸಾಧ್ಯತೆ ಇದೆ. ಮಂಡ್ಯಕ್ಕೆ ಎಂಟ್ರಿ ಕೊಡೋ ಮೂಲಕ ಹಳೇ ಮೈಸೂರು ಭಾಗದಿಂದ ರಾಜ್ಯ ಪ್ರವಾಸ ಆರಂಭಿಸಿರುವ ಅಮಿತ್ ಶಾ 2023ರ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ನಾಳೆ ಮಂಡ್ಯದಲ್ಲಿ ಅಮಿತ್ ಶಾ ಭೇಟಿ ಮೂಲಕ ಬಿಜೆಪಿ ತಂತ್ರಗಾರಿಕೆ ಶುರು ಮಾಡಿದೆ.
ಅಮಿತ್ ಶಾ ಬಂದು ಹೋದ ನಂತರ ಮುಂದಿನ ತಿಂಗಳು ಅಂದ್ರೆ ಜನವರಿಯಲ್ಲಿ ಬೆಂಗಳೂರು- ಮೈಸೂರು ಹೈವೇ ಉದ್ಘಾಟನೆಗೆ ಪ್ರಧಾನಿ ಮೋದಿ ಕೂಡ ಆಗಮಿಸೋ ಸಾಧ್ಯತೆ ಇದೆ. ಈ ವೇಳೆ ಪ್ರಧಾನಿ ರೋಡ್ ಶೋಗೂ ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಹಿಡಿತಕ್ಕೆ ಬಿಜೆಪಿ ಮುಂದಾಗಿದೆ.