ರಾಜ್ಯ ನಾಯಕರು ಸುಸ್ತು: ಮಧ್ಯರಾತ್ರಿಯ ಕೋರ್ ಕಮಿಟಿ ಸಭೆ ಬರ್ಖಾಸ್ತು

Public TV
3 Min Read
bjp meet 1

– ಕರ್ನಾಟಕದಲ್ಲಿ ಶಾ ಪ್ರವಾಸ ಇವತ್ತು ಕೊನೆ
– ಬೆಳ್ಳಂಬೆಳಗ್ಗೆ ಆರ್‍ಎಸ್‍ಎಸ್ ಪ್ರಮುಖರೊಂದಿಗೆ ಸಭೆ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಮಧ್ಯರಾತ್ರಿ ಅಮಿತ್ ಶಾ ಮೈಚಳಿ ಬಿಡಿಸಿದ್ದಾರೆ. ಮಧ್ಯರಾತ್ರಿ ಸುಮಾರು 1 ಗಂಟೆ ತನಕ ಕೋರ್ ಕಮಿಟಿ ಸಭೆ ನಡೆಸಿದ್ದಾರೆ.

ಭಾನುವಾರ ರಾತ್ರಿ 11.15ಕ್ಕೆ ಆರಂಭವಾದ ಕೋರ್ ಕಮಿಟಿ ಸಭೆ ಮುಗಿದಿದ್ದು ಮಧ್ಯರಾತ್ರಿ 1 ಗಂಟೆಗೆ. ಡಿಸೆಂಬರ್‍ಗೆ ಎಲೆಕ್ಷನ್‍ಗೆ ರೆಡಿಯಾಗಿರಬೇಕು. ಅವಧಿಗೂ ಮುನ್ನವೇ ಚುನಾವಣೆ ನಡೆದ್ರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಕೂಡ ಗುಜರಾತ್ ಎಲೆಕ್ಷನ್ ಜತೆಯಲ್ಲೇ ಕರ್ನಾಟಕದಲ್ಲೂ ಚುನಾವಣೆಗೆ ಹೋಗಲು ಚಿಂತಿಸ್ತಿದೆ. ಪಕ್ಷದಲ್ಲಿ ಒಗ್ಗಟ್ಟು ಮುಖ್ಯ, ಕಿತ್ತಾಡುವವರಿಗೆ ಬಿಜೆಪಿಯಲ್ಲಿ ಜಾಗ ಇಲ್ಲ ಎಂದು ಅಮಿತ್ ಶಾ ಖಡಕ್ ಆಗಿ ಹೇಳಿದ್ದಾರೆಂದು ಪಬ್ಲಿಕ್ ಟಿವಿಗೆ ಬಿಜೆಪಿ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

bjp meet

ಪ್ರಮುಖ ಸಮುದಾಯದ ಮತಗಳ ಮೇಲೆ ಕಣ್ಣಿಡಬೇಕು. ವೀರಶೈವ ಲಿಂಗಾಯತ ಧರ್ಮದ ವಿಚಾರದಲ್ಲಿ ಸದ್ಯಕ್ಕೆ ತಟಸ್ಥವಾಗಿರಿ, ಆದ್ರೆ ಮಠಾಧೀಶರನ್ನ ಒಟ್ಟುಗೂಡಿಸುವ ಕೆಲಸ ಗುಪ್ತವಾಗಿ ನಡೆಯಲಿ. ಮಹದಾಯಿ ವಿಚಾರದಲ್ಲಿಯೂ ಕೇಂದ್ರದ ವಿರುದ್ಧ ಅಸಮಾಧಾನ ಬಾರದಂತೆ ನೋಡಿಕೊಳ್ಳಿ. ಮುಂದಿನ ತಿಂಗಳೇ ಗೋವಾಕ್ಕೆ ರಾಜ್ಯ ಬಿಜೆಪಿ ನಿಯೋಗ ತೆರಳಿ. ಮೂರ್ನಾಲ್ಕು ತಿಂಗಳಲ್ಲಿ ಮಹದಾಯಿ ವಿವಾದ ವಿಚಾರಕ್ಕೆ ಕೇಂದ್ರ ಮುಲಾಮು ಹಚ್ಚುತ್ತೆ. ಮುಂದಿನ ತಿಂಗಳಿನಿಂದಲೇ ಬಿಜೆಪಿ ಎಲೆಕ್ಷನ್ ವಾರ್ ರೂಂಗಳು ಕೆಲಸ ಮಾಡುತ್ವೆ ಅಂತ ಮಧ್ಯರಾತ್ರಿ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ತಂತ್ರಗಾರಿಕೆ ಪಾಠ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪೀಡ್‍ಗೆ ರಾಜ್ಯ ಬಿಜೆಪಿ ನಾಯಕರು ಸುಸ್ತೋ ಸುಸ್ತು. ಒಂದಾದ ಮೇಲೊಂದು ಸಭೆಗಳಿಗೆ ಬಿಜೆಪಿ ಪ್ರಮುಖ ನಾಯಕರಿಗೆ ಮಂಕು ಬಡಿದಂತಾಗಿದೆ. ರಾಜ್ಯ ಬಿಜೆಪಿ ನಾಯಕರ ಸ್ಲೋ ವರ್ತನೆ ನೋಡಿ ಅಮಿತ್ ಶಾ ಅವರೇ ಶಾಕ್ ಆಗಿದ್ದಾರೆ.

bjp meet 1

ಹೆಲ್ತ್ ಚೆಕ್ ಮಾಡಿಸಿಕೊಳ್ಳಿ, ಇದು ಸ್ಯಾಂಪಲ್ ಅಷ್ಟೇ. ಮುಂದೈತೆ ಮಾರಿಹಬ್ಬ ಎಂಬ ಸಂದೇಶವನ್ನು ಅಮಿತ್ ಶಾ ರವಾನಿಸಿದ್ದಾರೆ. ಇನ್ನು ಎಂಟತ್ತು ತಿಂಗಳು ನನ್ ಸ್ಪೀಡ್ ಇರಲೇಬೇಕು, ಆದ್ರೆ ನಿಮ್ಮನ್ನ ನೋಡ್ತಿದ್ರೆ ಇಷ್ಟಕ್ಕೆ ಬಳಲಿದವರಂತೆ ಕಾಣ್ತಿದ್ದೀರ. ಮಾನಸಿಕವಾಗಿ ಎಫರ್ಟ್ ಹಾಕೋದು ಬೇರೆ, ದೈಹಿಕವಾಗಿ ಫಿಟ್ ಆಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮುಂದಿನ ದಿನಗಳಲ್ಲಿ ವಾರವೆಲ್ಲಾ ಸಭೆಗಳು ನಡೆದ್ರೂ ಅಚ್ಚರಿ ಇಲ್ಲ ಎಂದು ಬಿಎಸ್‍ವೈ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ಶಾ ಖಡಕ್ ಸೂಚನೆ ಕೂಡ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಶಾ ಸ್ಪೀಡ್‍ಗೆ ಅನಂತಕುಮಾರ್ ಬಿಟ್ಟರೇ ಬೇರೆ ಯಾರು ಅಡ್ಜಸ್ಟ್ ಆಗಲಿಲ್ಲವಂತೆ. ಇದನ್ನು ಗಮನಿಸಿಯೇ ಅಮಿತ್ ಶಾ ಆರೋಗ್ಯದ ಟಿಪ್ಸ್ ಕೊಟ್ಟಿದ್ದಾರಂತೆ.

bjp meet 2

ಎರಡು ದಿನಗಳಿಂದ ಸಭೆ ಮೇಲೆ ಸಭೆಗಳನ್ನು ನಡೆಸಿ ರಾಜ್ಯ ಬಿಜೆಪಿ ನಾಯಕರನ್ನ ಸುಸ್ತಾಗಿಸಿರುವ ಶಾ, ಇವತ್ತು ಕೂಡ 5 ಮಹತ್ವದ ಸಭೆಗಳನ್ನ ನಡೆಸಲಿದ್ದಾರೆ. ಈಗಾಗಲೇ ಆರ್‍ಎಸ್‍ಎಸ್ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‍ಎಸ್‍ಎಸ್ ಕಚೇರಿ ಕೇಶವ ಕೃಪದಲ್ಲಿ ಬೆಳಗ್ಗೆಯಿಂದ ಸಭೆ ನಡೆಯುತ್ತಿದೆ. ಜೊತೆಗೆ ವಿವಿಧ ಪ್ರಕೋಷ್ಟಗಳ ಪದಾಧಿಕಾರಿಗಳ ಸಭೆ, ಎಸ್‍ಸಿ-ಎಸ್‍ಟಿ ಮೋರ್ಚಾ ಸಭೆ, ಹಿಂದುಳಿದ ಮೋರ್ಚಾ ಸಭೆ, ಬಿಜೆಪಿ ಹಿತ ಚಿಂತಕರ ಸಭೆ ನಡೆಸಿ ಮಧ್ಯಾಹ್ನದ ಮೇಲೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.

bjp meet 3

ಬೆಳಗ್ಗೆ 8 ಗಂಟೆಗೆ ಚಾಮರಾಜಪೇಟೆ ಕೇಶವಕೃಪಾದಲ್ಲಿ ಆರ್‍ಎಸ್‍ಎಸ್, ಬಿಜೆಪಿ ಸಮನ್ವಯ ಸಭೆ.
ಬೆಳಗ್ಗೆ 10 ಗಂಟೆಗೆ ಬಿಜೆಪಿಯ ವಿವಿಧ ಪ್ರಕೋಷ್ಟಗಳ ಪದಾಧಿಕಾರಿಗಳ ಸಭೆ.
ಬೆಳಗ್ಗೆ 11.30ಕ್ಕೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಪ್ರಗತಿ ಪರಿಶೀಲನಾ ಸಭೆ.
ಮಧ್ಯಾಹ್ನ 2ಗಂಟೆಗೆ 3 ದಿನಗಳ ಪ್ರವಾಸದ ಅನುಭವದ ಬಗ್ಗೆ ಮಾಧ್ಯಮಗೋಷ್ಠಿ.
ಸಂಜೆ 4 ಗಂಟೆಗೆ, ಬಿಜೆಪಿ ಹಿತ ಚಿಂತಕರ ಸಭೆ.
ಸಂಜೆ 5 ಗಂಟೆಗೆ ಬಿಜೆಪಿ ಎಸ್‍ಸಿ-ಎಸ್‍ಟಿ ಮೋರ್ಚಾ ಸಭೆ.
ಸಂಜೆ 6ಕ್ಕೆ ಬಿಜೆಪಿ ಹಿಂದುಳಿದ ಮೋರ್ಚಾ ಸಭೆ.
ರಾತ್ರಿ 7.30ಕ್ಕೆ ವಾಪಸ್ ದೆಹಲಿಗೆ ಪ್ರಯಾಣ.

https://twitter.com/ShobhaBJP/status/896936332001370112

https://twitter.com/ShobhaBJP/status/896684217953730560

https://twitter.com/ShobhaBJP/status/896671486605316096

bjp meet 7

bjp meet 8

bjp meet 6

bjp meet 5

bjp meet 4

Share This Article
Leave a Comment

Leave a Reply

Your email address will not be published. Required fields are marked *