ಧಾರವಾಡ: ಅಪರಾಧಿಗಳು ಈಗ ಎಲ್ಲರಿಗಿಂತ ಮುಂದೆ ಇದ್ದಾರೆ. ಅಪರಾಧಿಗಳ ತನಿಖೆ ಹಾಗೂ ಪತ್ತೆಗೆ ಫಾರೆನ್ಸಿಕ್ ಕ್ಯಾಂಪಸ್‌ಗಳು ಸದ್ಯದ ಅವಶ್ಯಕತೆಯಾಗಿವೆ. ದೇಶದಲ್ಲಿ ಕ್ರೈಂಗಳಿಗೆ ಕಡಿವಾಣ ಹಾಕಲು ಕರ್ನಾಟಕದಂತೆಯೇ ದೇಶದ ಎಲ್ಲ ಕಡೆ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.
ಧಾರವಾಡದಲ್ಲಿ (Dharwad) ಫಾರೆನ್ಸಿಕ್ ಕ್ಯಾಂಪಸ್ (Forensic University Centre) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಇದೊಂದು ಯುನಿಕ್ ವಿಶ್ವವಿದ್ಯಾಲಯ. ಇದರ ಲಾಭ ಎಲ್ಲರಿಗೂ ಆಗಲಿದೆ. ದೇಶದಲ್ಲಿ ನಕಲಿ ನೋಟು, ಹವಾಲಾ ಹಣ ದಂಧೆ ಹಾಗೂ ಮಹಿಳಾ ದೌರ್ಜನ್ಯಗಳು ನಡೆಯುತ್ತಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣ ಆಗಲೇಬೇಕಿವೆ ಎಂದರು.
Advertisement
Advertisement
ಈಗ ಹೊಡೆದು ಬಾಯಿ ಬಿಡಿಸುವ ಕಾಲ ಹೋಗಿದೆ. ಫಾರೆನ್ಸಿಕ್ ವಿಭಾಗದಲ್ಲಿ ಅಮೆರಿಕ ಶೇ. 90ರಷ್ಟು ಹಾಗೂ ಇಸ್ರೇಲ್ ಶೇ. 60ರಷ್ಟು ಮುಂದೆ ಇವೆ. ನಾವು ಶೇ.50 ರಷ್ಟು ಪ್ರಗತಿ ಸಾಧಿಸಿದ್ದೇವೆ. ನಮ್ಮಲ್ಲೂ ಫಾರೆನ್ಸಿಕ್ ಅನಿವಾರ್ಯ ಮಾಡಬೇಕಿದೆ. ಇದರಿಂದಾಗಿ ದೇಶದ ಎಲ್ಲ ಕಡೆ 10 ಸಾವಿರ ಪರಿಣಿತರು ಸಿಗುತ್ತಾರೆ ಎಂದ ಶಾ, ಆರೋಪಿಗಳನ್ನು ಅಪರಾಧಿಗಳನ್ನಾಗಿ ಪತ್ತೆ ಮಾಡುವುದಕ್ಕಾಗಿ ಐಪಿಸಿ ಹಾಗೂ ಸಿಆರ್‌ಪಿಸಿ ಆ್ಯಕ್ಟ್‌ನಲ್ಲಿ ನಾವು ಬದಲಾವಣೆ ಮಾಡಲು ಹೊರಟಿದ್ದೇವೆ. ಇದರ ಜೊತೆಗೆ ಪುಣೆ, ಭೋಪಾಲ್ ಹಾಗೂ ಕೋಲ್ಕತ್ತಾದಲ್ಲಿರುವ ಫಾರೆನ್ಸಿಕ್ ಕ್ಯಾಂಪಸ್‌ಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆದಿದೆ. ಧಾರವಾಡದಲ್ಲಿ ಈ ಕ್ಯಾಂಪಸ್ ತರಲು ಜೋಶಿ (Pralhad Joshi) ನನಗೆ ಬೆನ್ನು ಬಿದ್ದಿದ್ದರು. ಒಂದೇ ದಿನದಲ್ಲಿ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಈ ಕ್ಯಾಂಪಸ್‌ಗೆ 50 ಎಕರೆ ಜಾಗ ಕೊಟ್ಟರು. ಹೀಗಾಗಿ 9ನೇ ಕ್ಯಾಂಪಸ್ ಆಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿಗೆ ಭಯ ಹುಟ್ಟಿದೆ, ಹೀಗಾಗಿ ರಾಜ್ಯಕ್ಕೆ ಮೋದಿ-ಶಾರನ್ನು ಕರೆಸುತ್ತಿದ್ದಾರೆ : ಸಿದ್ದರಾಮಯ್ಯ
Advertisement
Advertisement
ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್ ಕೊಡಲು ಸಿಎಂ ಅವರಿಗೆ ಹೇಳಿದ್ದೇನೆ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲ ಆಗಲಿದೆ. ಇದರಲ್ಲಿ ಡಿಎನ್‌ಎ, ಕೃಷಿ ಸೇರಿ ಹಲವು ವಿಷಯಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ರೆ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ, 5 ಸೀಟು ಗೆದ್ದು ತೋರಿಸಲಿ: HDK ಸವಾಲ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k