ಗಾಂಧೀನಗರ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಂಗಳವಾರ ಗಾಳಿಪಟ ಹಾರಿಸಿ ಮಕರ ಸಂಕ್ರಾಂತಿ ಆಚರಣೆ ಮಾಡಿದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಅಮಿತ್ ಶಾ ಅಹಮದಾಬಾದ್‌ನ ಶಾಂತಿನಿಕೇತನ ಸೊಸೈಟಿಯ ಕಟ್ಟಡವೊಂದರ ಮೇಲ್ಛಾವಣಿಯಿಂದ ಗಾಳಿಪಟ ಹಾರಿಸಿ ಖುಷಿಪಟ್ಟರು.
Advertisement
Advertisement
ಪ್ರತಿ ವರ್ಷ ಜ.14 ರಂದು ದೇಶಾದ್ಯಂತ ಆಚರಿಸಲಾಗುವ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ.
Advertisement
ಅಮಿತ್ ಶಾ ಅವರು ಮೇಮ್ನಗರದ ಶಾಂತಿನಿಕೇತನ ಸೊಸೈಟಿಯಲ್ಲಿ ಸ್ಥಳೀಯರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಿದರು. ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು ಎಂದು ಸಿಎಂ ಭೂಪೇಂದ್ರ ಪಟೇಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
Advertisement
ಮಕರ ಸಂಕ್ರಾಂತಿಯಂದು ಭಕ್ತರು ಸೂರ್ಯನಿಗೆ ಅರ್ಪಣೆಗಳನ್ನು ಸಲ್ಲಿಸುತ್ತಾರೆ. ಈ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಬಿಹು, ಗುಜರಾತ್‌ನಲ್ಲಿ ಇದನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ.