ಲಕ್ನೋ: ವಿಧಾನಸಭೆ ಚುನಾವಣೆಗೆ ಫೆ.10 ರಿಂದ ಮತದಾನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮನೆ-ಮನೆ ಪ್ರಚಾರ ಮಾಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗ ರ‍್ಯಾಲಿ, ಪ್ರಚಾರ, ಸಭೆಗಳಿಗೆ ಚುನಾವಣಾ ಆಯೋಗವು ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಕೆಲವು ಹಳ್ಳಿಗಳಿಗೆ ಹೋಗಿದ್ದಾರೆ. ಕಾಲ್ನಡಿಗೆಯಲ್ಲೇ ಮನೆ- ಮನೆ ಬಾಗಿಲಿಗೆ ಹೋಗಿ ಮತ ಯಾಚಿಸಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ
आज पश्चिम उत्तर प्रदेश के कैराना में घर-घर जाकर संपर्क किया और भाजपा को पुनः प्रचंड बहुमत के साथ चुनने की अपील की।
कभी पलायान के डर से सहमी इन आँखों में आज सुरक्षा का भाव और आत्मसम्मान का गौरव देखकर मन को बहुत खुशी हुई। #हर_घर_भाजपा pic.twitter.com/9CUR1eHKi2
— Amit Shah (@AmitShah) January 22, 2022
ಸಮಾಜವಾದಿ ಪಕ್ಷಗಳ ಆಡಳಿತಾವಧಿಯಲ್ಲಿ ಸಾವಿರಾರು ಹಿಂದೂ ಕುಟುಂಬಗಳು ಗುಳೆ ಹೋಗಿದ್ದ ಉತ್ತರಪ್ರದೇಶ ಕೈರಾನಕ್ಕೆ ಅಮಿತ್ ಶಾ ಅವರು ಶನಿವಾರ ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಿ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಶಾ ಮನೆ-ಮನೆ ಪ್ರಚಾರ ಮಾಡಿದ್ದಾರೆ.
मैं कैराना और पूरे पश्चिम उत्तर प्रदेश की जनता को विश्वास दिलाता हूँ कि प्रधानमंत्री मोदी जी के मार्गदर्शन में चल रही उत्तर प्रदेश की योगी सरकार आपकी सुरक्षा, सम्मान और कल्याण के लिए निरंतर कार्य करती रहेगी। #हर_घर_भाजपा pic.twitter.com/ujpMkq2TXR
— Amit Shah (@AmitShah) January 22, 2022
2017ರ ವಿಧಾನಸಭೆ ಚುನಾವಣೆಯಲ್ಲೂ ಕೈರಾನಾದಿಂದ ಸಾವಿರಾರು ಹಿಂದೂ ಕುಟುಂಬಗಳನ್ನು ಗುಳೆ ಹೋಗುವಂತೆ ಮಾಡಿದ್ದ ಅಂಶವನ್ನು ರಾಜಕೀಯ ತಂತ್ರವಾಗಿ ಬಿಜೆಪಿ ಬಳಸಿಕೊಂಡಿದೆ. ಇದೀಗ ಚುನಾವಣಾ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಶಾ ಕೈರಾನಾಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.