ಬೆಂಗಳೂರು: ಆ ಒಂದು ದಿನ ದೆಹಲಿಯಿಂದ ಬಂತು ತುರ್ತು ಕರೆ ಬರುತ್ತೆ. ಆ ಕಡೆಯಿಂದ ತೂರಿ ಬಂದ ಮಾತಿಗೆ ಬಿಎಸ್ ಯಡಿಯೂರಪ್ಪ ಸೈಲೆಂಟ್ ಆಗ್ತಾರೆ. ಅಷ್ಟಕ್ಕೂ ಆ ಕರೆ ಮಾಡಿದವರು ಯಾರು? ಏಕೆ ಗೊತ್ತಾ? ಅನ್ನೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಿ. ಒಂದು ಕರೆಯ ಹಿಂದೆ ಯಡಿಯೂರಪ್ಪ ನಿಶಬ್ಧ ಕುತೂಹಲ ಹುಟ್ಟುಹಾಕಿದೆ.
ಅಂದಹಾಗೆ ಅದು ಹೊಸ ವರ್ಷದ ಮೂರನೇ ದಿನ ಜನವರಿ 3. ದೆಹಲಿಯಿಂದ ಬಿಎಸ್‍ವೈಗೆ ತುರ್ತುಕರೆ ಬಂದೇ ಬಿಡ್ತು. ಬಿಎಸ್‍ವೈಗೆ ಕಾಲ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫುಲ್ ಗರಂ ಆಗಿದ್ರಂತೆ. ತುಮಕೂರಿನಲ್ಲಿ ಪ್ರಧಾನಿ ಎದುರಿನ ಭಾಷಣಕ್ಕೆ ಗರಂ ಆದ ಅಮಿತ್ ಶಾ ಯಡಿಯೂರಪ್ಪಗೆ ಗರಂ ಕ್ಲಾಸ್ ತಗೊಂಡರಂತೆ. ನಾವು ವಿಲನ್, ತಾವು ಹೀರೋ. ಆದ್ರಲ್ಲವಾ ಯಡಿಯೂರಪ್ಪಜೀ ಅಂದ್ರಂತೆ ಅಮಿತ್ ಶಾ. ಪ್ರಧಾನಿ ಎದುರು ಈ ರೀತಿ ಮಾತನಾಡುವ ಅವಶ್ಯಕತೆ ಇತ್ತಾ ಯಡಿಯೂರಪ್ಪಜೀ, ಯಡಿಯೂರಪ್ಪಜೀ ನಿಮಗೆ ಏನಾಗಿತ್ತು? ಏಕೆ ಹೀಗೆ ಮಾಡಿದ್ರಿ ಅಂತಾ ಅಮಿತ್ ಶಾ ಪ್ರಶ್ನಿಸಿದ್ರು ಎನ್ನಲಾಗಿದೆ.
Advertisement
Advertisement
ಆದ್ರೆ ಅಮಿತ್ ಶಾ ಮಾತಿಗೆ ಸಮರ್ಥನೆ ನೀಡದೇ ಸುಮ್ಮನಾದ ಯಡಿಯೂರಪ್ಪ, ಮನವಿ ರೂಪದಲ್ಲಿ ಹೇಳಲು ಹೋಗಿ ಆಗ್ರಹ ರೂಪ ಪಡೆದುಕೊಂಡಿದೆ. ನಿಮ್ಮನ್ನ ಮುಖಾಮಖಿ ಭೇಟಿಯಾದಾಗ ಮಾತಾಡ್ತೀನಿ, ನಾನು ಅಸಮಾಧಾನ ಅರ್ಥದಲ್ಲಿ ಹೇಳಿಲ್ಲ ಅಂತಾ ಚುಟುಕು ಸ್ಪಷ್ಟನೆ ನೀಡಿದರಂತೆ. ಆದರೆ ಯಡಿಯೂರಪ್ಪ ಪ್ರತಿಕ್ರಿಯೆಗೆ ತೃಪ್ತರಾಗದ ಅಮಿತ್ ಶಾ ಗರಂ ಆಗಿಯೇ ಕಾಲ್ ಕಟ್ ಮಾಡಿದರು ಎನ್ನಲಾಗಿದೆ.
Advertisement
ಒಟ್ಟಿನಲ್ಲಿ ಸಿಎಂ ಭಾಷಣವನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಯಡಿಯೂರಪ್ಪ ಮುಖಾಮುಖಿ ಭೇಟಿಯಾದಾಗ ಅಮಿತ್ ಶಾಗೆ ಏನ್ ಹೇಳ್ತಾರೆ? ಯಾವ ರೀತಿ ಸಮರ್ಥಿಸಿಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.