ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಗೆ ಇವತ್ತು ಮುಹೂರ್ತ ಫಿಕ್ಸ್ ಆಗುತ್ತಾ? ಒಂದೂ ಕಾಲು ತಿಂಗಳಿಂದ ಕಾದು ಕುಳಿತಿರುವ ಆಕಾಂಕ್ಷಿ ಶಾಸಕರು ಮಂತ್ರಿಗಳಾಗ್ತಾರಾ? ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಗೆ ಅಮಿತ್ ಶಾ ತೆರೆ ಎಳೀತಾರಾ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂತಹ ಹತ್ತಾರು ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಸಸ್ಪೆನ್ಸ್. ಅಮಿತ್ ಶಾ-ಯಡಿಯೂರಪ್ಪ ಭೇಟಿ ಬಳಿಕವೇ ಈ ಸಸ್ಪೆನ್ಸ್ ಗೆ ಉತ್ತರ ಸಿಗಲಿದೆ. ಈ ಮಧ್ಯೆ ಸಿಎಂ ಯಡಿಯೂರಪ್ಪನವರು ಅಮಿತ್ ಶಾ ಅವರ ಜೊತೆ ಮಾತುಕತೆ ಎಲ್ಲಿ ನಡೆಸ್ತಾರೆ ಅನ್ನೋದೂ ಸಸ್ಪೆನ್ಸ್ ಆಗಿದೆ. ಮೂರು ಸಂದರ್ಭಗಳಲ್ಲಿ ಸಿಎಂ ಮತ್ತು ಅಮಿತ್ ಶಾ ಮಧ್ಯೆ ಮಾತುಕತೆಗೆ ಅವಕಾಶ ಸಿಗಲಿದೆ. ಬೆಂಗಳೂರು, ಬಿಎಸ್ ಎಫ್ ಸ್ಪೆಷಲ್ ಫ್ಲೈಟ್ ಮತ್ತು ಹುಬ್ಬಳ್ಳಿ.
Advertisement
Advertisement
ಈ ಮೂರು ಸ್ಥಳಗಳಲ್ಲಿ ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಲು ಸಿಎಂಗೆ ಅವಕಾಶಗಳಿವೆ. ಈ ಪೈಕಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಯುವ ದಟ್ಟ ಸಾಧ್ಯತೆಗಳಿವೆ. ಹುಬ್ಬಳ್ಳಿಗೆ ಸಿಎಂ ಮತ್ತು ಅಮಿತ್ ಶಾ ಒಟ್ಟಿಗೆ ಬಿಎಸ್‍ಎಫ್ ನ ಫ್ಲೈಟ್ ನಲ್ಲಿ ಇಂದು ಮಧ್ಯಾಹ್ನ ಪ್ರಯಾಣ ಬೆಳೆಸುವಾಗ ಮತ್ತು ಸಂಜೆ ಹುಬ್ಬಳ್ಳಿಯ ಖಾಸಗಿ ಹೊಟೇಲಿನಲ್ಲಿ. ಇವೆರಡು ಸಂದರ್ಭಗಳ ಪೈಕಿ ಮೊದಲ ಅವಕಾಶದಲ್ಲಿ ಸಿಎಂ ಗೆ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಲು ಒಂದು ಗಂಟೆ ಕಾಲಾವಕಾಶ ಸಿಗಲಿದೆ.
Advertisement
ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಒಂದೇ ಫ್ಲೈಟ್‍ನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲಿದ್ದಾರೆ. ಅಮಿತ್ ಶಾ ಮತ್ತು ಸಿಎಂ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಟ್ಟಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಈ ಜಂಟಿ ಪ್ರಯಾಣದಲ್ಲಿ ಸಿಎಂಗೆ ಒಂದು ಗಂಟೆ ಕಾಲಾವಕಾಶ ಸಿಗಲಿದೆ. ಈ ವೇಳೆಯೇ ಸಿಎಂ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ಜೊತೆ ಚರ್ಚೆ ಮಾಡುವ ಸಾಧ್ಯತೆ ದಟ್ಟವಾಗಿದೆ.
Advertisement
ಈ ಒಂದು ಗಂಟೆಯ ಫ್ಲೈಟ್ ಜರ್ನಿ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಜೊತೆ ಸಿಎಂ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಸಂಭಾವ್ಯ ಸಚಿವರ ಪಟ್ಟಿಯನ್ನು ಅಮಿತ್ ಶಾಗೆ ನೀಡಲಿದ್ದಾರೆ. ನೂತನ ಸಚಿವರ ಪಟ್ಟಿಗೆ ಅಮಿತ್ ಶಾ ಒಪ್ಪಿಗೆ ಪಡೆದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಗೆ ಅನುಮತಿ ಕೇಳಲಿದ್ದಾರೆ ಎಂದು ಹೇಳಲಾಗಿದೆ. ಒಂದೊಮ್ಮೆ ಅಮಿತ್ ಶಾ ಸಂಪುಟ ಮಾತುಕತೆಗೆ ಫ್ಲೈಟ್ ನಲ್ಲೇ ಒಪ್ಪಿಗೆ ಕೊಟ್ರೆ ಸಂಪುಟ ಕಸರತ್ತು ಅರ್ಧ ಮುಗಿದಂತೆಯೇ. ಆ ಒಂದು ಗಂಟೆ ಬೆಂಗಳೂರು ಟು ಹುಬ್ಬಳ್ಳಿ ಫ್ಲೈಟ್ ಜರ್ನಿ ವೇಳೆ ಸಂಪುಟ ಮ್ಯಾಜಿಕ್ ನಡೆಯುತ್ತಾ ಎಂಬ ಕುತೂಹಲ ಮೂಡಿದೆ. ವಿಮಾನದಲ್ಲಿ ಅಮಿತ್ ಶಾ ಯಡಿಯೂರಪ್ಪ ಬಿಟ್ಟರೆ ಬೇರೆ ಯಾರಿಗೂ ಅವಕಾಶ ಇಲ್ಲ ಎನ್ನಲಾಗಿದೆ. ಸಂಭಾವ್ಯ ಸಚಿವರ ಪಟ್ಟಿಯನ್ನು ಈಗಾಗಲೇ ಸಿಎಂ ರೆಡಿ ಮಾಡಿದ್ದಾರೆ. ವಿಶೇಷ ವಿಮಾನದಲ್ಲೇ ಸಂಭಾವ್ಯ ಸಚಿವರ ಪಟ್ಟಿಗೆ ಸಿಎಂ ಗ್ರೀನ್ ಸಿಗ್ನಲ್ ಪಡೆಯಲು ಸಜ್ಜಾಗಿದ್ದಾರೆ. ಸಿಎಂ ಅವರ ಈ ಪ್ರಯತ್ನ ವರ್ಕೌಟ್ ಆಗುತ್ತಾ ಎಂದು ಕಾದು ನೋಡಬೇಕಿದೆ.