ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕರು ಶುಕ್ರವಾರ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು ಗರಂ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಇದೇ ದಿನ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹೀಗಾಗಿ ರಾಮಭಕ್ತರನ್ನು ಅಪಮಾನಿಸುವ ಸಲುವಾಗಿಯೇ ಕಾಂಗ್ರೆಸ್ ಬ್ಲಾಕ್ ಫ್ರೈಡೆ ಆಚರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರೇ ನೀವು ಹೀಗೆ ಮಾಡಿದ್ದು ಎಷ್ಟು ಸರಿ? ಇನ್ನೂ ಎಷ್ಟು ದಿನ ಈ ತುಷ್ಟೀಕರಣ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಂತೂ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ. ಪವಿತ್ರವಾದ ದಿನದಂದೂ ಕಪ್ಪು ಬಟ್ಟೆ ಧರಿಸ್ತೀರಾ? ಕಾಂಗ್ರೆಸ್ ನಾಯಕರ ನಡೆ ಪ್ರಜಾಪ್ರಭುತ್ವಕ್ಕೆ, ನ್ಯಾಯವ್ಯವಸ್ಥೆಗೆ ಮಾಡುತ್ತಿರುವ ಅಪಮಾನ ಎಂದು ಗರಂ ಆಗಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಇದನ್ನೂ ಓದಿ: ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?
Advertisement
Advertisement
ಜೈರಾಮ್ ರಮೇಶ್ ಟ್ವೀಟ್ ಮಾಡಿ, ಬೆಲೆ ಏರಿಕೆ ಖಂಡಿಸಿ ನಾವು ಪ್ರತಿಭಟನೆ ಮಾಡ್ತಿದ್ರೆ, ಕೇಂದ್ರ ಗೃಹಮಂತ್ರಿಗಳು ಇಲ್ಲೂ ಮತೀಯ ರಾಜಕಾರಣ ಮಾಡಲು ಹೊರಟಿದ್ದಾರೆ. ಬೋಗಸ್ ಆರ್ಗ್ಯೂಮೆಂಟ್ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆಗೆ ವೋಟಿಂಗ್ – NDA ಅಭ್ಯರ್ಥಿ ಜಗದೀಪ್ ಧನ್ಕರ್ ಆಯ್ಕೆ ಖಚಿತ
ಎಐಸಿಸಿ ವಕ್ತಾರ ಪವನ್ ಖೇರಾ, ಜಿಎಸ್‌ಟಿ, ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದ ಬಗ್ಗೆ ಜನ ಪ್ರಶ್ನೆ ಮಾಡ್ತಾ ಇದ್ದಾರೆ. ಇವೆಲ್ಲಾ ಅವರಿಗೆ ಔಟಾಫ್ ಸಿಲಬಸ್. ಅದಕ್ಕೆ ಮಂದಿರ-ಮಸೀದಿಯ ಉತ್ತರ ನೀಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.