ಬೀಜಿಂಗ್/ಲಂಡನ್: ಚೀನಾದಲ್ಲಿ(China) ಕೋವಿಡ್ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ(Crude Oil Price) ಭಾರೀ ಇಳಿಕೆಯಾಗಿದೆ.
ಒಂದು ಬ್ಯಾರೆಲ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯಟ್ ಕಚ್ಚಾ ತೈಲ ದರ 74 ಡಾಲರ್‌ಗೆ (6,040 ರೂ.) ಇಳಿಕೆಯಾಗಿದೆ. ಡಿಸೆಂಬರ್ ಬಳಿಕ ರಷ್ಯಾ ಉಕ್ರೇನ್ ಯುದ್ಧದಿಂದ 139 ಡಾಲರ್‌ಗೆ ಏರಿಕೆಯಾಗಿದ್ದ ದರ ಮೊದಲ ಬಾರಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
Advertisement
Advertisement
ಚೀನಾದಲ್ಲಿ ಕೋವಿಡ್(Covid 19) ನಿಯಂತ್ರಣ ಮಾಡಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ಬಿಗಿಯಾದ ಲಾಕ್‌ಡೌನ್(Lockdown) ಜಾರಿ ಮಾಡಿದೆ. ಪರಿಣಾಮ ಭಾರೀ ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ತೈಲ, ಕಬ್ಬಿಣದ ಅದಿರು ಮತ್ತು ಸೋಯಾಬೀನ್‌ಗಳನ್ನು ಚೀನಾ ಭಾರೀ ಪ್ರಮಾಣದಲ್ಲಿ ಆಮದು ಮಾಡುತ್ತಿದೆ. ಆರ್ಥಿಕತೆಯು ಮುಗ್ಗರಿಸಿದ್ದರಿಂದ ಈ ವರ್ಷ ಈಗಾಗಲೇ ಖರೀದಿಗಳು ನಿಧಾನಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬಿದ್ದಿದೆ. ಇದನ್ನೂ ಓದಿ: ಡೌನ್ ಡೌನ್ ಕ್ಸಿ ಜಿನ್‌ಪಿಂಗ್.. ಲಾಕ್‌ಡೌನ್ ತೆಗೆಯಿರಿ – ಚೀನಾದಲ್ಲಿ ಭುಗಿಲೆದ್ದ ಜನಾಕ್ರೋಶ
Advertisement
ತಾಮ್ರ ಶೇ.1.7, ಕಬ್ಬಿಣದ ಅದಿರು, ಶೇ.2, ತೈಲ ದರ ಶೇ.5.4 ರಷ್ಟು ಕುಸಿದಿದ್ದರೆ ಅಡುಗೆ ತೈಲದ ದರ ಶೇ.3 ರಷ್ಟು ಕುಸಿದಿದೆ. ಚೀನಾದಲ್ಲಿ ಭಾನುವಾರ 39,791 ಕೇಸ್ ದಾಖಲಾಗಿದ್ದರೆ ಸೋಮವಾರ 40,052 ಕೊರೊನಾ ಕೇಸ್ ದಾಖಲಾಗಿವೆ.
ಸಾಧಾರಣವಾಗಿ ಚೀನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುವುದು ಬಹಳ ಅಪರೂಪ. ಆದರೆ ಈಗ ಸರ್ಕಾರದ ಕಠಿಣ ನಿಯಮಕ್ಕೆ ರೋಸಿ ಹೋಗಿ ಜನ ಬೀದಿಗೆ ಇಳಿದಿದ್ದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.