ಭೋಪಾಲ್: ಪ್ರೀತಿಗೆ ಎಂತಹ ಸವಾಲು ಬಂದರೂ ಎದುರಿಸುವ ಶಕ್ತಿ ಇರುತ್ತದೆ. ಅದೇ ರೀತಿ ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈಗ ದಕ್ಷಿಣ ಅಮೆರಿಕದ ಹುಡುಗಿಯೂ ಒಬ್ಬ ರೈತನನ್ನು ಪ್ರೀತಿಸಿ ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಹೋಷಂಗಾಬಾದ್‍ನಲ್ಲಿ ನಡೆದಿದೆ.
ವರ ದೀಪಕ್ ರಜಪೂತ್ ಮತ್ತು ಜೆಲ್ಲಿ ಲಿಝೆತ್ ಇಂದು ಹೋಳಿ ಹಬ್ಬದ ದಿನದಂದು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀಪಕ್ ಬೈಸನಿ ಜಿಲ್ಲೆಯ ಸಿವ್ನಿ ಮಾಲ್ವದವರಾಗಿದ್ದು, ಅಮೆರಿಕಾದ ಜೆಲ್ಲಿ ಲಿಝೆತ್ ಅವರನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದರು. ಜೆಲ್ಲಿ ದಕ್ಷಿಣ ಅಮೆರಿಕದಲ್ಲಿ ಮಹಿಳಾ ಸಂಪನ್ಮೂಲ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement
Advertisement
ಪ್ರೀತಿ ಹುಟ್ಟಿದ್ದು:
ಇಬ್ಬರೂ ತಮ್ಮ ನಂಬರ್ ತೆಗೆದುಕೊಂಡು ಫೇಸ್‍ಬುಕ್ ನಲ್ಲಿ ಸ್ನೇಹಿತರಾಗಿದ್ದರು. ನಂತರ ಇಬ್ಬರು ವಾಟ್ಸಪ್, ಮೆಸೆಂಜರ್ ಮೂಲಕ ಚಾಟ್ ಮಾಡಲು ಆರಂಭಿಸಿದರು. ಮುಂದುವರಿದಂತೆ ಇಬ್ಬರು ಪರಸ್ಪರ ಫೋನಿನ ಮೂಲಕ ಮಾತನಾಡುತ್ತಿದ್ದರು. ಒಮ್ಮೆ ಜೆಲ್ಲಿ ಪ್ರವಾಸಕ್ಕೆಂದು ಬಂದಾಗ ಎರಡು ತಿಂಗಳು ಭಾರತದಲ್ಲಿದ್ದರು. ಈ ವೇಳೆ ಎರಡು ಬಾರಿ ಮಾತ್ರ ಇಬ್ಬರು ಭೇಟಿಯಾಗಿದ್ದರು. ಬಳಿಕ ತಮ್ಮ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದು, ಇಬ್ಬರು ಇಂದು ನರ್ಮದಾ ನದಿಯ ದಡದ ಚಿತ್ರಗುಪ್ತ ದೇವಸ್ಥಾನದಲ್ಲಿ ಹೋಳಿ ಹಬ್ಬದ ದಿನವೇ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ಒಬ್ಬರಿಗೊಬ್ಬರು ಬಣ್ಣ ಹಚ್ಚುವ ಮೂಲಕ ಹೋಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
Advertisement
ಜೆಲ್ಲಿಗೆ ಮೂರು ವರ್ಷಗಳಿಂದ ದೀಪಕ್ ಪರಿಚಯವಿದ್ದು, ದೀಪಕ್ ಬಿಕಾಂ ಪದವಿ ಓದಿದ್ದಾರೆ. ದೀಪಕ್ ತಾನು ಮಾತನಾಡುವ ವಿಷಯ ಮತ್ತು ಇಂಗ್ಲಿಷ್ ಮೂಲಕ ಜೆಲ್ಲಿಯ ಹೃದಯವನ್ನು ಗೆದ್ದಿದ್ದರು. ಸ್ನೇಹಿತರಂತೆ ಮಾತನಾಡುತ್ತಾ ದಿನಕಳೆದಂತೆ ಪ್ರೀತಿ ಮಾಡಿದ್ದಾರೆ. ನಂತರ ದೀಪಕ್ ಮದುವೆಯ ಬಗ್ಗೆ ಹೇಳಿದಾಗ ಜೆಲ್ಲಿ ಒಪ್ಪಿಕೊಂಡಿದ್ದಾರೆ. ಇಬ್ಬರ ಪ್ರೀತಿಯನ್ನು ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದಾರೆ.
Advertisement
“ನಾವು ಮೂರು ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕ ನಮ್ಮ ಪರಿಚಯ ಆರಂಭವಾಯಿತು. ಕಳೆದ ಆರು ತಿಂಗಳುಗಳಿಂದ ನಾವು ವಾಟ್ಸಪ್ ಮತ್ತು ಫೋನಿನಲ್ಲಿ ಮಾತನಾಡುತ್ತಿದ್ದೆವು. 2 ತಿಂಗಳುಗಳಿಂದ ಜೆಲ್ಲಿ ಭಾರತ ಪ್ರವಾಸ ಮಾಡುತ್ತಿದ್ದರು. ಈ ವೇಳೆ ಆಕೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ತುಂಬಾ ಇಷ್ಟವಾಗಿದೆ” ಎಂದು ದೀಪಕ್ ಹೇಳಿದ್ದಾರೆ.
“ದೀಪಕ್ ನನ್ನ ಬಳಿ ಬಂದು ನಾನು ದಕ್ಷಿಣ ಅಮೆರಿಕದ ಹುಡುಗಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದು ಹೇಳಿದರು. ನಂತರ ನಾನು ನ್ಯಾಯಾಲಯದಲ್ಲಿ ವಿವಾಹ ಸಂಬಂಧ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಈಗ ಅವರು ಹಿಂದೂ ಪದ್ಧತಿಯ ಪ್ರಕಾರ ಮದುವೆಯಾಗಿದ್ದಾರೆ” ವಕೀಲರಾದ ಆನಂದ್ ದುಬೆ ತಿಳಿಸಿದ್ದಾರೆ.