ಅಮೆರಿಕಾದ ಪ್ರಸಿದ್ಧ ರ‍್ಯಾಪರ್ ಕಾರ್ಡಿ ಬಿ (Cardi B) ಇದೀಗ ಬ್ಯಾಡ್ ನ್ಯೂಸ್ ಜೊತೆಯೊಂದು ಸಿಹಿಸುದ್ದಿ ಹಂಚಿಕೊಂಡು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಡಿವೋರ್ಸ್‌ಗೆ (Divorce) ಅರ್ಜಿ ಸಲ್ಲಿಸಿದ ಮರುದಿನವೇ ಅಮ್ಮನಾಗ್ತಿರುವ ವಿಷಯ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಡಿವೋರ್ಸ್ ಪಡೆಯುತ್ತಿರುವ ಸುದ್ದಿ ಬೆನ್ನಲ್ಲೇ ಪ್ರೆಗ್ನೆನ್ಸಿ ಫೋಟೋಸ್ ಶೇರ್ ಮಾಡಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿರುವ ಕಾರ್ಡಿ ಬಿ, ಹಾಟ್ ಆಗಿ ಪೋಸ್ ನೀಡಿದ್ದಾರೆ. ಪ್ರತಿಯೊಂದು ಅಂತ್ಯದೊಂದಿಗೆ ಹೊಸ ಆರಂಭ ಬರುತ್ತದೆ. ಈ ಹಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ನೀವು ನನಗೆ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನೀವು ನನ್ನ ಸಾಧನೆಗೆ ಸಹಾಯ ಮಾಡಿದ್ದೀರಿ. ನನಗೆ ಸ್ಫೂರ್ತಿ ನೀಡಿದ್ದೀರಿ ಎಂದು ಭಾವನ್ಮಾಕವಾಗಿ ಕಾರ್ಡಿ ಬಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್ ಸಿನಿಮಾ ಎಂದ ಆರ್‌ಜಿವಿ
View this post on Instagram
ಅಂದಹಾಗೆ, ಕಾರ್ಡಿ ಬಿ 3ನೇ ಬಾರಿ ತಾಯಿಯಾಗ್ತಿರುವ ಖುಷಿಯ ಸುದ್ದಿ ಹಂಚಿಕೊಳ್ಳುವ ಒಂದು ದಿನ ಮೊದಲು ಅವರ 6 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಲು ರೆಡಿಯಾಗಿರುವ ವಿಷ್ಯ ಹೊರಬಿದ್ದಿದೆ. ಡಿವೋರ್ಸ್‌ಗೆ ಅರ್ಜಿ ಹಾಕಿರುವ ವಿಚಾರವು ಕಾರ್ಡಿ ಬಿ ಮ್ಯಾನೇಜರ್ ಕಡೆಯಿಂದ ಮಾಧ್ಯಮಕ್ಕೆ ಸ್ಪಷ್ಟನೆ ಸಿಕ್ಕಿದೆ. ಈ ವಿಚಾರ ಈಗ ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಇದರ ನಡುವೆ ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಕಾರ್ಡಿ ಬಿ ಸದ್ದು ಮಾಡುತ್ತಿದ್ದಾರೆ.
2017ರಲ್ಲಿ ಪತಿ ಆಫ್ಸೆಟ್‌ನಿಂದ (Offset) ನನಗೆ ವಿಶ್ವಾಸದ್ರೋಹ ಆಗಿದೆ ಎಂದು ಕಾರ್ಡಿ ಬಿ ಹೇಳಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದ ಕಾರ್ಡಿ ಬಿ, ಪತಿ ನನಗೆ ಮೋಸ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದು. ಅದಕ್ಕಾಗಿ ಅವರಿಂದ ಬೇರೆಯಾಗ್ತಿದ್ದೇನೆ ಎಂದಿದ್ದರು. ಆದರೆ ಆ ನಂತರ ಇದರ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿರಲಿಲ್ಲ. ಇನ್ನೂ ಕಾರ್ಡಿ ಬಿ ಅವರಿಗೆ 6 ವರ್ಷದ ಮಗಳು ಮತ್ತು 2 ವರ್ಷದ ಮಗನಿದ್ದಾನೆ. ಇವೆರಡೂ ಆಫ್ಸೆಟ್ ಮಕ್ಕಳಾಗಿದ್ದು, 3ನೇ ಮಗುವಿಗೂ ಆಫ್ಸೆಟ್ ಅಪ್ಪನಾಗಲಿದ್ದಾನೆ.