ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಇದ್ದ ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ’ಕಾನರ್ ಶುಕ್ರವಾರ ತಿಳಿಸಿದ್ದಾರೆ.
80 ವರ್ಷ ಪ್ರಾಯದ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಗಾಯದ ರೂಪದಲ್ಲಿ ಕ್ಯಾನ್ಸರ್ (Cancer) ಇದ್ದಿದ್ದು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್‌ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಕಣ್ಗಾವಲು ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು
Advertisement
Advertisement
ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಅವರು ಕರ್ತವ್ಯಕ್ಕೆ ಯೋಗ್ಯ ಎಂದು ಘೋಷಿಸಲಾಗಿತ್ತು.
Advertisement
ಬೈಡನ್ 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ