ಪ್ರಾರ್ಥನೆ ನಂತ್ರ ಸೆಕ್ಸ್ ಮಾಡ್ತೇನೆ ಎಂದ ಮಾಡೆಲ್

Public TV
1 Min Read
model

ವಾಷಿಂಗ್ಟನ್: ಇತ್ತೀಚೆಗೆ ಟಾಲಿವುಡ್ ನಟಿ ಇಲಿಯಾನಾ “ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ” ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಇದೀಗ ರೂಪದರ್ಶಿಯೊಬ್ಬರು “ಪ್ರಾರ್ಥನೆ ಮುಗಿದ ಬಳಿಕ ನಾನು ಸೆಕ್ಸ್ ಮಾಡಲು ಬಯಸುತ್ತೇನೆ” ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದಾರೆ. ಇದೀಗ ಇವರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ.

ಅಮೆರಿಕನ್ ರೂಪದರ್ಶಿ ಆಶ್ಲೇ ಗ್ರಹಾಂ ಈ ರೀತಿ ಹೇಳಿಕೆ ನೀಡಿದ್ದಾರೆ. ಗ್ರಹಾಂ ಇತ್ತೀಚೆಗೆ ‘ಎ ಲಿಟ್ಲ್ ಲೇಟ್ ವಿತ್ ಲಿಲ್ಲಿ ಸಿಂಗ್’ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾನು ಪ್ರಾರ್ಥನೆ ಮುಗಿದ ಬಳಿಕ ನನ್ನ ಪತಿಯೊಂದಿಗೆ ಸೆಕ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

str2 s8 s8revlon ashley s8 1 ONLINE

ನನಗೂ, ನನ್ನ ಪತ್ನಿ ಜಸ್ಟಿನ್ ಎವ್ರಿನ್‍ಗೆ ಜೀಸಸ್ ಬಗ್ಗೆ ಹಾಗೂ ನಾವು ಮಾಡುವ ಧ್ಯಾನ-ಪ್ರಾರ್ಥನೆಗಳ ಬಗ್ಗೆ ನಂಬಿಕೆ ಇದೆ. ಹೀಗಾಗಿ ನಾವು ಪ್ರಾರ್ಥನೆ ಮಾಡಲು ಚರ್ಚ್‍ಗೆ ಹೋಗುತ್ತಿರುತ್ತೇವೆ. ಪ್ರಾರ್ಥನೆ ಮುಗಿದ ನಂತರ ಮನೆಗೆ ಬಂದು ಇಬ್ಬರೂ ಸೆಕ್ಸ್ ಮಾಡುತ್ತೇನೆ. ಪ್ರಾರ್ಥನೆ ಮಾಡಿ ಬಂದು ಸೆಕ್ಸ್ ಮಾಡುವುದು ನಮಗೆ ತಪ್ಪೆನಿಸಲಿಲ್ಲ. ಯಾಕೆಂದರೆ ಪ್ರಾರ್ಥನೆ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ಹಾಗೆಯೇ ಸೆಕ್ಸ್ ದೈಹಿಕವಾಗಿ ನೆಮ್ಮದಿ ನೀಡುತ್ತದೆ ಎಂದು ಗ್ರಹಾಂ ಹೇಳಿದ್ದಾರೆ.

ಗ್ರಹಾಂ ಅವರ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಸದ್ಯಕ್ಕೆ 32 ವರ್ಷದ ಮಾಡೆಲ್ ಗರ್ಭಿಣಿಯಾಗಿದ್ದು, ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ಗರ್ಭಿಣಿಯ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

model 1

Share This Article
Leave a Comment

Leave a Reply

Your email address will not be published. Required fields are marked *