ವಾಷಿಂಗ್ಟನ್: ಫೈಜರ್ ಕೋವಿಡ್ ಲಸಿಕೆಯನ್ನು 5ರಿಂದ 11 ವಯಸ್ಸಿನ ಮಕ್ಕಳಿಗೆ ನೀಡಲು ಯುಎಸ್ ಆರೋಗ್ಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ.
“ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಮಹತ್ವದ ತಿರುವಿಗೆ ಸಾಕ್ಷಿಯಾಗಿದ್ದೇವೆ” ಎಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಮಕ್ಕಳ ಬಗ್ಗೆ ಪೋಷಕರು ಇನ್ಮುಂದೆ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಂದ ಇತರರಿಗೆ ಹರಡಬಹುದಾದ ಕೊರೊನಾ ಸೋಂಕನ್ನು ನಿಯಂತ್ರಿಸಲು ಫೈಜರ್ ಲಸಿಕೆಯು ಸಹಕಾರಿಯಾಗಿದೆ. ವೈರಸ್ ವಿರುದ್ಧದ ಹೋರಾಟಕ್ಕೆ ಅಮೆರಿಕ ಇಟ್ಟ ಮಹತ್ವದ ಹೆಜ್ಜೆ ಇದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ʼಪುನೀತ ನೆನಪು’ ದುಬೈ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪುಗೆ ನುಡಿನಮನ
Advertisement
ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ವಾರಾಂತ್ಯದಲ್ಲಿ ಅಧಿಕಾರಿಗಳು ಲಕ್ಷಾಂತರ ಡೋಸ್‌ಗಳನ್ನು ಪ್ಯಾಕ್ ಮಾಡಿ ರವಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ಶೀಘ್ರವೇ ಆರಂಭಿಸಲಾಗುವುದು. ನವೆಂಬರ್ 8 ರಿಂದ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸುಧಾ ಮೂರ್ತಿಯವರ ದೀಪಾವಳಿ ಗಿಫ್ಟ್- ಮಕ್ಕಳಿಗೆ ಹೊಸ ಪುಸ್ತಕ
ಪ್ರತಿ ಮಕ್ಕಳಿಗೆ ಮೂರು ವಾರಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುವುದು.
ಅಮೆರಿಕದಲ್ಲಿ 5ರಿಂದ 11 ವರ್ಷದೊಳಗಿನ ಸುಮಾರು 1.9 ಮಿಲಿಯನ್ (19 ಲಕ್ಷ) ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಅವರಲ್ಲಿ 8,300 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 100 ಮಕ್ಕಳು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಕ್ಕಳಿಗೆ ನೀಡುವ ಫೈಜರ್ ಕೋವಿಡ್ ಲಸಿಕೆಯು ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಅಮೆರಿಕ ಫೆಡರಲ್ ಆರೋಗ್ಯ ನಿಯಂತ್ರಕರು ಈ ಹಿಂದೆ ತಿಳಿಸಿದ್ದರು.