ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇದೀಗ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು? ಎಂದು ಅಮೆರಿಕ ನಟ ಕೈಲ್ ಪೌಲ್ (Kyle Paul) ವಿವರಿಸಿದ್ದಾರೆ. ಯಶರನ್ನು ಹಾಡಿ ಹೊಗಳಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಅನುಭವ ನಿಜಕ್ಕೂ ಅದ್ಭುತ ಎಂದಿದ್ದಾರೆ. ಈ ಕುರಿತು ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ
“The best experience I ever had!”: American actor Kyle Paul opens up about learning Kannada for Rocking Star Yash’s ‘ #Toxic : A Fairytale For Grown-ups’ pic.twitter.com/uWpcK5WNu0
— BA Raju’s Team (@baraju_SuperHit) March 19, 2025
‘ಟಾಕ್ಸಿಕ್’ ಸಿನಿಮಾದಲ್ಲಿ ಎಮೋಷನಲ್ ಸನ್ನಿವೇಶಗಳಿವೆ. ಭಾರತದ ಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಇಂತಹ ಸನ್ನಿವೇಶಗಳಲ್ಲಿ ನಟಿಸಿದ್ದನ್ನು ಮರೆಯೋಕೆ ಸಾಧ್ಯವಿಲ್ಲ. ನಿರ್ದೇಶಕಿ ಗೀತು ನಟಿಸಲು ಬಹಳ ಸಹಕಾರ ನೀಡಿದರು. ಬಹಳ ಸಮಯ ತೆಗೆದುಕೊಂಡು ನಟಿಸಲು ಹೇಳುತ್ತಿದ್ದರು, ಸದಾ ಹುರಿದುಂಬಿಸುತ್ತಿದ್ದರು. ಚಿತ್ರತಂಡದ ಜೊತೆ ಕೆಲಸ ಮಾಡಿದ ಅನುಭವ ನಿಜಕ್ಕೂ ಅದ್ಭುತವಾಗಿತ್ತು ಎಂದು ಕೈಲ್ ಪೌಲ್ ಕೊಂಡಾಡಿದ್ದಾರೆ. ಚಿತ್ರದಲ್ಲಿ ಕನ್ನಡದಲ್ಲೇ ಡೈಲಾಗ್ ಹೇಳಿ ಕೈಲ್ ಪೌಲ್ ಥ್ರಿಲ್ ಆಗಿದ್ದಾರೆ.
ಇನ್ನೂ ಇತ್ತೀಚೆಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪರ‍್ರಿ (JJ Perry) ಅವರು ಯಶ್ ‘ಟಾಕ್ಸಿಕ್’ ಸಿನಿಮಾವನ್ನು ಹೊಗಳಿದ್ದರು. ‘ಟಾಕ್ಸಿಕ್’ ಚಿತ್ರದಲ್ಲಿ ನನ್ನ ಸ್ನೇಹಿತ ಯಶ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಭಾರತದಲ್ಲಿ ಇದ್ದಿದ್ದು ಖುಷಿ ಕೊಟ್ಟಿತು. ಯುರೋಪ್‌ನ ನನ್ನ ಅನೇಕ ಆತ್ಮೀಯ ಸ್ನೇಹಿತರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದನ್ನು ನೋಡಲು ಕಾದಿದ್ದೇನೆ. ಟಾಕ್ಸಿಕ್ ಸಿನಿಮಾ ನಿಜಕ್ಕೂ ಅದ್ಭುತ. ನಾವು ಏನನ್ನು ಮಾಡಿದ್ದೇವೋ ಆ ಬಗ್ಗೆ ಹೆಮ್ಮೆ ಇದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಯಶ್ ಜೊತೆಗಿನ ಫೋಟೋ ಶೇರ್ ಮಾಡಿ ಜೆಜೆ ಪೆರ್ರಿ ಬರೆದುಕೊಂಡಿದ್ದರು.
ಇನ್ನೂ ‘ಟಾಕ್ಸಿಕ್’ ಚಿತ್ರವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಒಟ್ಟಿಗೆ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾಗೆ ಹಾಲಿವುಡ್‌ನ ಫೇಮಸ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಆಕ್ಷನ್ ದೃಶ್ಯಗಳನ್ನು ಡೈರೆಕ್ಷನ್ ಮಾಡಿದ್ದಾರೆ. ಯಶ್ ಮತ್ತು ಕೆವಿಎನ್ ಸಂಸ್ಥೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.
‘ಕೆಜಿಎಫ್ 2’ ಹಿಟ್ ಆದ್ಮೇಲೆ ಯಶ್ ಅವರು ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮ ಜರುಗಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರದ ರಿಲೀಸ್‌ಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.