ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಅಡ್ಡಗಟ್ಟಿದ ಗಜರಾಜ

Public TV
1 Min Read
Elephant chamarajnagara

ಚಾಮರಾಜನಗರ: ಕಾಡಾನೆಯೊಂದು ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಅಡ್ಡಗಟ್ಟಿ ತೊಂದರೆಯುಂಟು ಮಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

Elephant chamarajnagara 2

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಕನಕ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಧ್ಯ ರಾತ್ರಿ ಕನಕ ಮತ್ತು ಪೋಷಕರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೊರಟಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕಾಡಾನೆಯೊಂದು ನಿಂತಿದೆ. ಇದನ್ನೂ ಓದಿ:  ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ ಮೋದಿ 

Elephant chamarajnagara 1

ಕಿರಿದಾದ ರಸ್ತೆಯಲ್ಲಿ ವಾಹನಕ್ಕೆ ಜಾಗ ಬಿಡದೇ ಕಾಡಾನೆ ನಿಂತಿತ್ತು. ಆಂಬುಲೆನ್ಸ್‌ನಲ್ಲಿದ್ದವರು ಆನೆಗೆ ಟಾರ್ಚ್‍ಲೈಟ್ ಬಿಟ್ಟು ಓಡಿಸುವ ಪ್ರಯತ್ನ ಮಾಡಿದರು. ಈ ವೇಳೆ ಆಂಬುಲೆನ್ಸ್ ಕಡೆಗೆ ಕಾಡಾನೆ ಓಡಿಬಂದಿದೆ.

ಕೂಡಲೇ ಆಂಬುಲೆನ್ಸ್ ಚಾಲಕ ಹಿಂದಕ್ಕೆ ಚಲಿಸಿದ್ದಾನೆ. ನಂತರ ಕಾಡಾನೆ ಬೇರೆ ದಾರಿಯಲ್ಲಿ ತೆರಳಿದೆ.

Share This Article
Leave a Comment

Leave a Reply

Your email address will not be published. Required fields are marked *