ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರಿನಲ್ಲಿ ಈಗಾಗಲೇ ಪ್ರಕಾಶ್ ರೈ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಸೇವೆ ಶುರು ಮಾಡಿದ್ದಾರೆ. ಜಿಲ್ಲೆಗೊಂದು ಆಂಬ್ಯುಲೆನ್ಸ್ (Ambulance) ಕೊಡಬೇಕು ಎನ್ನುವುದು ಪ್ರಕಾಶ್ ರೈ ಸಂಕಲ್ಪವಾಗಿತ್ತು. ಈಗಾಗಲೇ ಮೈಸೂರು ಜಿಲ್ಲೆಗೆ ಅದನ್ನು ಮಾಡಿದ್ದಾರೆ. ಈ ಸಂಗತಿಯನ್ನು ಅವರು ನಿನ್ನೆ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಅಲ್ಲದೇ, ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಮತ್ತು ಶಿವರಾಜ್ ಕುಮಾರ್ ಕೂಡ ತಲಾ ಒಂದು ಆಂಬ್ಯುಲೆನ್ಸ್ ಕೊಡುವುದಾಗಿ ಹೇಳಿರುವ ವಿಚಾರವನ್ನೂ ಹಂಚಿಕೊಂಡರು.
Advertisement
ಪ್ರಕಾಶ್ ರೈ (Prakash Raj) ಅವರು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಯಶ್ (Yash) ಕೂಡ ಅದಕ್ಕೆ ಕೈ ಜೋಡಿಸಿದರು. ಯಶ್ ವೇದಿಕೆಯ ಮೇಲೆ ಬಂದು ಪ್ರಕಾಶ್ ರೈ ಅವರು ಮಾಡುತ್ತಿರುವ ಕೆಲಸವನ್ನು ಮೆಚ್ಚಿಕೊಂಡು ಅದಕ್ಕೆ ತಾವೂ ಕೈ ಜೋಡಿಸುತ್ತೇನೆ ಅಂದರು. ಅಲ್ಲದೇ, ಉಳಿದಿರುವ 25 ಜಿಲ್ಲೆಗಳಿಗೆ ತಾವೇ ಆಂಬ್ಯುಲೆನ್ಸ್ ಕೊಡುವುದಾಗಿ ಘೋಷಣೆ ಮಾಡಿದರು. ಯಶ್ ಮಾತಿಗೆ ಎದ್ದು ನಿಂತು ಚೆಪ್ಪಾಳೆ ತಟ್ಟಿ, ವೇದಿಕೆಗೆ ಬಂದು ಯಶ್ ನನ್ನು ತಬ್ಬಿಕೊಂಡರು ಪ್ರಕಾಶ್ ರೈ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್
Advertisement
Advertisement
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.
Advertisement
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.