ಅಮರಾವತಿ: ಅನೈತಿಕ ಸಂಬಂಧ ಹೊಂದಿದ್ದ ಮಗಳನ್ನು (Daughter) ಹತ್ಯೆ ಮಾಡಿರುವುದಾಗಿ ತಂದೆಯೋರ್ವ (Father) ಒಪ್ಪಿಕೊಂಡಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ ನಡೆದಿದೆ.
ಲಿಖಿತಾ ಶ್ರೀ(16) ಮೃತ ಬಾಲಕಿ. ಲಿಖಿತಾಳನ್ನು ಆಕೆಯ ತಂದೆ ವರ ಪ್ರಸಾದ್ ಕೊಲೆ ಮಾಡಿದ್ದಾನೆ. ಈತ ರೆಲ್ಲಿವೀಧಿಯಲ್ಲಿ ಅಂಬುಲೆನ್ಸ್ ಡ್ರೈವರ್ (Ambulance Driver) ಆಗಿ ಕೆಲಸ ಮಾಡುತ್ತಿದ್ದ. ವರಪ್ರಸಾದ್ ತನ್ನ ಮಗಳು ಲಿಖಿತಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿರುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ವೀಡಿಯೋದಲ್ಲಿ ಏನಿದೆ?: ಹಿರಿಯ ಮಗಳು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಆದರೆ ಕಿರಿಯ ಮಗಳು ಲಿಖಿತಾ 10 ನೇ ತರಗತಿಯಲ್ಲಿ ಓದುತ್ತಿದ್ದಳು. ಲಿಖಿತಾಳನ್ನು ಅತಿಯಾಗಿ ಪ್ರೀತಿಯಿಂದ ಬೆಳೆಸಿದ್ದೆ. ಅವಳು ಕೇಳಿದ್ದನ್ನೆಲ್ಲಾ ಒದಗಿಸಿದ್ದೆ. ಆದರೆ ಲಿಖಿತಾ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು.
ಈ ಹಿನ್ನೆಲೆಯಲ್ಲಿ ನಾನು ಆತನ ಸವಹಾಸವನ್ನು ಬಿಡುವಂತೆ ಬುದ್ಧಿವಾದ ಹೇಳಿದ್ದೆ. ಆದರೂ ಆಕೆ ಕೇಳಿರಲಿಲ್ಲ. ಅದಕ್ಕಾಗಿಯೇ ಆಕೆಯನ್ನು ಕೊಂದಿದ್ದೇನೆ ಎಂದು ವೀಡಿಯೋದಲ್ಲಿ ವರಪ್ರಸಾದ್ ತಿಳಿಸಿದ್ದಾನೆ. ಇದನ್ನೂ ಓದಿ: ಗಂಗೆ ಮುಟ್ಟಿ ಆಣೆ ಮಾಡಲು ಹೋದವರು ನೀರುಪಾಲು
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ