ಚಾಮರಾಜನಗರ: ಅಂಬುಲೆನ್ಸ್ ಡೋರ್ ಓಪನ್ ಆಗದ ಕಾರಣ ರೋಗಿ ಹಾಗೂ ರೋಗಿಯ ಸಂಬಂಧಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಅಂಬುಲೆನ್ಸ್ ಒಳಗೆ ಪರದಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ತೆಂಗಿನಕಾಯಿ ಸುಲಿಯುವ ವೇಳೆ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕರಿನಂಜನಪುರದಿಂದ ರೋಗಿಯನ್ನು ಅಂಬುಲೆನ್ಸ್ ಮೂಲಕ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಅರ್ಧ ಗಂಟೆಗೂ ಹೆಚ್ಚಿನ ಕಾಲ ಅಂಬುಲೆನ್ಸ್ ಡೋರ್ ಲಾಕ್ ಆಗಿತ್ತು. ಎಷ್ಟೆ ಪ್ರಯತ್ನ ಮಾಡಿದರೂ ಡೋರ್ ಓಪನ್ ಆಗಲಿಲ್ಲ.
ಅಂಬುಲೆನ್ಸ್ ಒಳಗಿದ್ದ ರೋಗಿಯ ಹೊಟ್ಟೆ ಭಾಗದಲ್ಲಿ ಗಾಯವಾಗಿದ್ದು ತೀವ್ರವಾಗಿ ರಕ್ತ ಸ್ರಾವವಾಗುತ್ತಿತ್ತು. ಹೀಗಾಗಿ ಇದನ್ನು ಕಂಡು ರೋಗಿಯ ಸಂಬಂಧಿಕರು ಹಾಗೂ ಸ್ಥಳೀಯರು ಸುಮಾರು ಅರ್ಧ ಗಂಟೆಯಷ್ಟು ಪರಿಶ್ರಮ ಪಟ್ಟು ರಾಡ್ ಹಾಗೂ ಸುತ್ತಿಗೆ ಉಪಯೋಗಿಸಿ ಅಂಬುಲೆನ್ಸ್ ಬಾಗಿಲನ್ನು ತೆರೆದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.