ಬೀದರ್: ಬೈಕ್‍ಗೆ ಹಿಂಬದಿಯಿಂದ ಭೀಕರವಾಗಿ ಅಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹುಲಸೂರಿನ ಶಿವಾಜಿ ವೃತದಲ್ಲಿ ನಡೆದಿದೆ.
ಮೃತ ಬೈಕ್ ಸವಾರನನ್ನು ಸೂರ್ಯಭಾನು (58) ಎಂದು ಗುರುತಿಸಲಾಗಿದೆ. ಬೈಕ್‍ಗೆ ಡಿಕ್ಕಿಯಾಗಿರುವುದು ಪಶುಸಂಗೋಪನೆ ಅಂಬುಲೆನ್ಸ್ ಎಂದು ತಿಳಿದು ಬಂದಿದೆ. ಬೈಕ್ ಸವಾರ ಹುಲಸೂರು ಪಟ್ಟಣ್ಣದದಿಂದ ಭಾಲ್ಕಿಯ ದೇವನಾಳ ಗ್ರಾಮದ ಕಡೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಟೆರರಿಸ್ಟ್‌ಗಳೊಂದಿಗೆ ಲಿಂಕ್ ಬೆದರಿಕೆ – ಅಧಿಕಾರಿಗಳಂತೆ ಕಾಲ್ ಮಾಡಿ 6 ಲಕ್ಷ ರೂ. ದೋಖಾ!
Advertisement
Advertisement
ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗೆ ಕಲಬುರಗಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಬೈಕ್‍ಗೆ ಅಂಬುಲೆನ್ಸ್ ಡಿಕ್ಕಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಈ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೋಕಸಭೆಗೆ ಕಮಲ, ತೆನೆ ಮೈತ್ರಿ ಫೈನಲ್ – ಜೆಡಿಎಸ್‍ಗೆ 4 ಕ್ಷೇತ್ರವಷ್ಟೇ ಬಿಡಲು ಬಿಜೆಪಿ ಒಪ್ಪಿಗೆ
Web Stories