ಐಪಿಎಲ್‌ಗೆ ಗುಡ್‌ ಬೈ ಹೇಳಿದ CSK ಸ್ಟಾರ್‌ ಅಂಬಾಟಿ ರಾಯುಡು

Public TV
2 Min Read
Ambati Rayudu

ಅಹ್ಮದಾಬಾದ್: ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಸ್ಟಾರ್‌ ಆಟಗಾರ ಅಂಬಾಟಿ ರಾಯುಡು (37) (Ambati Rayudu) ಐಪಿಎಲ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ (GT) ಫೈನಲ್‌ ಪಂದ್ಯವು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ ಎಂದು‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: IPL 2023 Finals: ಕ್ಲೈಮ್ಯಾಕ್ಸ್‌ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ – ಪಂದ್ಯ ರದ್ದಾದ್ರೆ ಕಥೆ ಏನು?

Ambati Rayudu 1

5 ಬಾರಿ ಚಾಂಪಿಯನ್ಸ್‌ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌ (MI) ಹಾಗೂ 4 ಬಾರಿ ಚಾಂಪಿಯನ್‌ ಪಟ್ಟ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ನಂತಹ ಬಲಿಷ್ಠ ತಂಡಗಳನ್ನ ಪ್ರತಿನಿಧಿಸಿದ್ದ ಅಂಬಟಿ ರಾಯುಡು 14 ಆವೃತ್ತಿಯಲ್ಲಿ 204 ಪಂದ್ಯಗಳನ್ನಾಡಿದ್ದಾರೆ. 11 ಬಾರಿ ಪ್ಲೇ ಆಫ್ಸ್‌, 8 ಬಾರಿ ಫೈನಲ್ಸ್‌ ಪ್ರವೇಶಿಸಿದ್ದು ಮತ್ತು 5 ಟ್ರೋಫಿಗಳು. ಇದೀಗ 6ನೇ ಟ್ರೋಫಿ ಗೆಲ್ಲುವ ಅವಕಾಶ ಸಿಗಲಿ ಎಂಬ ಆಶಯದಲ್ಲಿದ್ದೇನೆ. ಇದೊಂದು ಅಮೋಘ ಪಯಣ. ಈ ಬಾರಿ ಐಪಿಎಲ್‌ ಫೈನಲ್‌ ನನ್ನ ಅಂತಿಮ ಐಪಿಎಲ್‌ ಪಂದ್ಯ ಎಂದು ನಿರ್ಧರಿಸಿದ್ದೇನೆ. ಈ ಅದ್ಭುತ ಟೂರ್ನಿಯಲ್ಲಿ ಆಡುವುದನ್ನು ಬಹಳ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದ. ಇಲ್ಲಿ ಯೂ ಟರ್ನ್ ಇಲ್ಲವೇ ಇಲ್ಲʼ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

Ambati Rayudu A

2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮೂಲಕ ಐಪಿಎಲ್‌ ಪ್ರವೇಶಿಸಿದ ರಾಯುಡು, 2013ರಲ್ಲಿ ತಂಡದೊಂದಿಗೆ ಮೊದಲ ಟ್ರೋಫಿಗೆ ಮುತ್ತಿಟ್ಟಿದ್ದರು. 2015, 2017ರಲ್ಲೂ ಟ್ರೋಫಿ ಗೆದ್ದ ಸಾಧನೆ ಮಾಡಿದ್ದರು. ಆ ನಂತರ ಹರಾಜಿನಲ್ಲಿ ಸಿಎಸ್‌ಕೆ ತಂಡದ ಪಾಲಾದರು. ಸಿಎಸ್‌ಕೆ ಪರವೂ 2018, 2021ರ ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ 2023ರ ಆವೃತ್ತಿಯಲ್ಲಿ ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿದ್ದರಿಂದ ಪ್ರತಿ ಇನ್ನಿಂಗ್ಸ್‌ನಲ್ಲೂ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿಯೇ ಕಣಕ್ಕಿಳಿದರು. ಈ ಬಾರಿ ಆಡಿದ ಒಟ್ಟು 15 ಪಂದ್ಯಗಳಲ್ಲಿ ರಾಯುಡು 132.38ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 139 ರನ್‌ ಮಾತ್ರವೇ ಗಳಿಸಿದ್ದಾರೆ.

ambati rayudu

ಯಶಸ್ವಿ ಆಟಗಾರ:
ಯಾವುದೇ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಆನೆ ಬಲ ತಂದುಕೊಡಬಲ್ಲ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಅಂಬಾಟಿ ರಾಯುಡು, ಐಪಿಎಲ್‌ ಕೆರಿಯರ್‌ನಲ್ಲಿ ಈವರೆಗೆ ಆಡಿದ 203 ಪಂದ್ಯಗಳಲ್ಲಿ ಬರೋಬ್ಬರಿ 4,329 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಮತ್ತು ಏಕೈಕ ಶತಕವಿದೆ. ಇದನ್ನೂ ಓದಿ: IPL 2023 Finals: ಗಿಲ್‌ ಅಬ್ಬರಕ್ಕೆ ಮುಂಬೈ ಬರ್ನ್‌ – 2ನೇ ಬಾರಿಗೆ ಗುಜರಾತ್‌ ಟೈಟಾನ್ಸ್‌ ಫೈನಲ್‌ಗೆ

Ambati Rayudu

ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್‌:
ಐಪಿಎಲ್‌ 2018 ಟೂರ್ನಿಯಲ್ಲಿ ನೀಡಿದ್ದ ಶ್ರೇಷ್ಠ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದಿದ್ದ ಅಂಬಾಟಿ ರಾಯುಡು, ಒಡಿಐ ಮತ್ತು ಟಿ20-ಐನಲ್ಲಿ ಸಿಕ್ಕ ಬೆರಳೆಣಿಕೆಯ ಅವಕಾಶಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆದರೂ ಅವರಿಗೆ ದೀರ್ಘಕಾಲದ ಅವಕಾಶ ಸಿಗದೇ ಹೋದದ್ದು ದುರದೃಷ್ಟವೇ ಸರಿ. 2019 ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲೂ ರಾಯುಡುಗೆ ಟೀಂ ಇಂಡಿಯಾದಲ್ಲಿ ಸ್ಥಾನ ನಿರಾಕರಿಸಲಾಯಿತು.

Share This Article