ಮೈಸೂರು: ಅಂಬರೀಶ್ ಅವರು ಹುಟ್ಟಿ ಬೆಳೆದಿದ್ದು ಅರಮನೆ ನಗರಿಯಲ್ಲಿ. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಅಜ್ಜ ಪಿಟೀಲು ಟಿ. ಚೌಡಯ್ಯ ಅವರ ನಿವಾಸ ಅಂಬರೀಶ್ ಹುಟ್ಟಿದ್ದರು.
ಪಿಟೀಲು ಟಿ. ಚೌಡಯ್ಯ ಅವರಿಗೆ ಮೂವರು ಹೆಣ್ಣುಮಕ್ಕಳು. ಹಿರಿಯಕ್ಕನಾದ ಪದ್ಮಮ್ಮ ಅವರು ಅಂಬರೀಶ್ ಅವರ ತಾಯಿ. ಅಂಬರೀಶ್ ಅವರು ಹುಟ್ಟಿದ್ದು ಅಜ್ಜನ ಮನೆಯಲ್ಲೇ ಎಂದು ಅವರ ಕುಟುಂಬಸ್ಥರು ತಳಿಸಿದ್ದಾರೆ.
ಈಗ ಈ ಮನೆಯಲ್ಲಿ ಅಂಬರೀಶ್ ಅವರ ಅಣ್ಣ ಆನಂದ್‍ಕುಮಾರ್ ಎಂ.ಎಚ್ ಅವರು ವಾಸವಾಗಿದ್ದಾರೆ. ಅಂಬರೀಶ್ ಅವರ ಸಾಕಷ್ಟು ಬಾಲ್ಯದ ನೆನಪುಗಳು ತಾತನ ಮನೆಯಲ್ಲಿದೆ. ಅಂಬರೀಶ್ ಹಾಗು ಮೈಸೂರಿಗೆ ಒಂದು ರೀತಿ ಅಭಿನಾಭಾವ ಸಂಬಂಧವಿದೆ. ಪ್ರಾಥಮಿಕ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಅಂಬರೀಶ್ ಅವರು ಮೈಸೂರಿನಲ್ಲೇ ಮುಗಿಸಿದ್ದಾರೆ. ತದನಂತರ ಅವರು ಬೆಂಗಳೂರಿನ ಕಡೆಗೆ ಬಂದರು. ಚಿತ್ರರಂಗ, ರಾಜಕಾರಣದಲ್ಲಿ ತಮ್ಮದೆಯಾದ ಛಾಪನ್ನು ಅಂಬರೀಶ್ ಅವರು ಮೂಡಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು.
ಅಂಬರೀಶ್ ಅವರು ಮೈಸೂರಿಗೆ ಬಂದರೆ ಆಗಾಗ ತಮ್ಮ ತಾತನ ಮನೆಗೂ ಹೋಗಿಬರುತ್ತಿದ್ದರು. ಅಂಬರೀಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ತಾತ ಪಿಟೀಲು ಟಿ. ಚೌಡಯ್ಯ ಅವರ ನೆನಪಿಗಾಗಿ ಮೈಸೂರಿನ ನಿವಾಸವನ್ನು ನವೀಕರಣಗೊಳಿಸದೇ ಹಾಗೇಯೆ ಬಿಟ್ಟಿದ್ದರು.
ಅಂಬರೀಶ್ ಅವರು ಮೈಸೂರಿಗೆ ಬಂದರೆ ಎಂದಿಗೂ ಒಂದೇ ಹೋಟೆಲ್‍ನಲ್ಲಿ ತಂಗುತ್ತಿದ್ದರು. ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿಯೇ ಯಾವಾಗಲೂ ಉಳಿದುಕೊಳ್ಳುತ್ತಿದ್ದರು. ಈ ಹೋಟೇಲ್‍ನಲ್ಲಿ ಅಂಬರೀಶ್ ಅವರಿಗಂತಲೇ ಪ್ರತ್ಯೆಕ ರೂಂ ನೀಡಲಾಗುತ್ತಿತ್ತು. ಅದೇ ರೂಂನಲ್ಲಿ ಯಾವಾಗಲೂ ರೆಬೆಲ್ ಸ್ಟಾರ್ ಉಳಿಯುತ್ತಿದ್ರು.
ರೂಂ ನಂ. 1032 ರೂಮ್ ಎಂದಿಗೂ ಅಂಬರೀಶ್ ಅವರಿಗಾಗಿಯೇ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಮೀಸಲಿಟ್ಟಿದ್ದರು. ರೂಂ ನಂ. 1032 ಗೆ ಅಂಬಿಸ್ ಎಂದೇ ಹೆಸರು ಕೂಡ ಇಡಲಾಗಿತ್ತು. ಹೋಟೆಲ್ ನ ಎಲ್ಲಾ ಸಿಬ್ಬಂದಿಯೊಂದಿಗೂ ಅಂಬರೀಶ್ ಅವರು ಸ್ನೇಹದಿಂದ ವರ್ತಿಸುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv