– ಇದು ನನ್ನ ಕಡೆ ಸಿನಿಮಾ ಎಂದು ಹೇಳಿ ಅಂಬಿ ಭಾವುಕ
– ಈಗ ಅದೇ ಕೊನೆಯ ಸಿನಿಮಾ
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಕೊನೆಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ಅಂಬುಲೆನ್ಸ್ ನಲ್ಲಿ ಹೋಗಿ ವೀಕ್ಷಿಸಿದ್ದರು.
ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಅಂಬರೀಶ್ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಿಚ್ಚ ಸುದೀಪ್ ಅವರು ಕಾರಣ. ಈ ಸಿನಿಮಾದಲ್ಲಿ ಅಭಿನಯಿಸುವ ವೇಳೆ ಅಂಬರೀಶ್ ಅನಾರೋಗ್ಯದಿಂದ ಸಾಕಷ್ಟು ಆಯಾಸಗೊಂಡಿದ್ದರು. ಇದನ್ನೂ ಓದಿ: ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್
- Advertisement 2
- Advertisement 3
ಅನಾರೋಗ್ಯದಿಂದ ಅಂಬಿ ಆಯಾಸಗೊಂಡ ಕಾರಣ ಅವರು ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದರು. ಆದರೆ ಬಹುದಿನಗಳ ನಂತರ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದರು.
- Advertisement 4
ತಮಿಳಿನ ಪವರ್ ಪಾಂಡಿ ಚಿತ್ರ ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾಗ ಈ ಚಿತ್ರದಲ್ಲಿ ನಟಿಸಿದ್ದ ರಜನಿಕಾಂತ್ ಅವರು ಅಂಬರೀಶ್ ನಟಿಸಿದ್ದರೆ ಚೆಂದ. ಏಕೆಂದರೆ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಹೇಳಿದ್ದರು. ರಜನಿ ಅವರ ಮಾತು ಕೇಳಿ ಅಂಬಿ ನಾನು ಈ ಸಿನಿಮಾ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದರು.
ಈ ಚಿತ್ರದ ಶೂಟಿಂಗ್ ವೇಳೆ ಅಂಬರೀಶ್ ಆರು ಬಾರಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂಬಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರು ಚಿತ್ರವನ್ನು ಸರಿಯಾದ ಸಮಯಕ್ಕೆ ಮುಗಿಸಿಕೊಟ್ಟಿದ್ದರು. ಈ ಚಿತ್ರದ ನಿರ್ಮಾಣಕ್ಕೆ ಅಂಬರೀಶ್ ಎಲ್ಲ ರೀತಿಯ ಸಹಾಯ ನೀಡಿದ್ದರು.
ಈ ಚಿತ್ರ ಬಿಡುಗಡೆಯಾಗುವ ಎರಡು ದಿನದ ಮೊದಲು ಕಲಾವಿದರ ಸಂಘ ಈ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಆ ವೇಳೆ ಅಂಬರೀಶ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಆಸ್ಪತ್ರೆಯಿಂದ ಅಂಬುಲೆನ್ಸ್ ನಲ್ಲೇ ಹೋಗಿ ಸಿನಿಮಾವನ್ನು ವೀಕ್ಷಿಸಿದ್ದರು.
ಅಂಬರೀಶ್ 15 ವರ್ಷದ ನಂತರ ಪೂರ್ಣ ಪ್ರಮಾಣವಾಗಿ ನಟಿಸಿದ ಸಿನಿಮಾ ಅದಾಗಿದ್ದು, ಆ ಸಂದರ್ಭದಲ್ಲಿ ಅವರು ಇದು ನನ್ನ ಕಡೆ ಸಿನಿಮಾ ಎಂದು ಹೇಳಿ ಭಾವುಕರಾಗಿದ್ದರು. ಆದರೆ ಈಗ ಅಂಬರೀಶ್ ಅವರಿಗೆ ಇದೇ ಕಡೆಯ ಸಿನಿಮಾ ಆಗಿ ಹೋಗಿದೆ.
ಕೆಲ ದಿನಗಳ ಹಿಂದೆ ಅಂಬರೀಶ್ ತಮ್ಮ ಪತ್ನಿ ಸುಮಲತಾ ಅವರು ನಟಿಸಿದ್ದ ‘ತಾಯಿಗೆ ತಕ್ಕ ಮಗ’ ಚಿತ್ರವನ್ನು ವೀಕ್ಷಿಸಿದ್ದರು. ಚಿತ್ರ ನೋಡಿದ ನಂತರ ಅಂಬಿ ಸಿನಿಮಾವನ್ನು ಪ್ರಶಂಸೆ ನೀಡಿ ಸಂತಸ ವ್ಯಕ್ತಪಡಿಸಿದ್ದರು. ಸದ್ಯ ಇದು ಅಂಬಿ ವೀಕ್ಷಿಸಿದ ಕೊನೆಯ ಚಿತ್ರ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv