ಬೆಂಗಳೂರು: ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಅವರು ಮದ್ರಾಸ್ ಗೆ ತೆರಳಿ ನಾವು ನಿಮ್ಮೊಂದಿಗೆ ಇದ್ದೇವೆ. ಆದರೆ ಕರ್ನಾಟಕದಲ್ಲಿ ಆ ರೀತಿಯ ವಿಕೋಪಗಳು ಅಲ್ಲಿಗಿಂತ ಐದರಷ್ಟು ಆಯ್ತು. ಆದ್ರೆ ಪ್ರಧಾನಿ ಇಲ್ಲಿಗೆ ಬಂದು ಭೇಟಿಯೂ ನೀಡಲಿಲ್ಲ. ಯಾಕೆ ಕರ್ನಾಟಕದವರು ಭಾರತೀಯರು ಅಲ್ವಾ ಅಂತಾ ಪ್ರಧಾನಿ ಮೋದಿ ಅವರಿಗೆ ರೆಬಲ್ ಸ್ಟಾರ್ ಅಂಬರೀಶ್ ಖಡಕ್ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದಲ್ಲಿ 18 ಜನ ಸಂಸದರು ಬಿಜೆಪಿಯಿಂದ ಗೆದ್ದು ಬಂದವರು. ಆದ್ರೆ ನಮಗೆ ಬಿಜೆಪಿಯ ಯಾವ ಸಂಸದರಿಂದಲೂ ಪ್ರಯೋಜನವಾಗಿಲ್ಲ. ಎಲ್ಲೆಲ್ಲಿಯೂ ಸ್ವಾರ್ಥ ತುಂಬಿಕೊಂಡಿದೆ. ಮಹಾರಾಷ್ಟ್ರದವರಿಗೆ ಅವರದೇ ಸ್ವಾರ್ಥ, ತಮಿಳುನಾಡಿನವರಿಗೆ ಸ್ವಾರ್ಥ, ನಮಗೂ ನಮ್ಮ ರಾಜ್ಯದ ಮೇಲೆ ಸ್ವಾರ್ಥ. ಎಲ್ಲರೂ ತಮ್ಮ ರಾಜ್ಯದ ಪರ ಸ್ವಾರ್ಥ ಹೊಂದಿರುತ್ತಾರೆ. ನದಿಯ ಬಗ್ಗೆ ಬಂದಾಗ ಎಲ್ಲರೂ ತಮ್ಮ ಸ್ವಾರ್ಥವನ್ನು ಬಿಡಬೇಕಾಗುತ್ತದೆ ಅಂತಾ ತಿಳಿಸಿದರು.
Advertisement
Advertisement
ನಾವೆಲ್ಲ ಒಂದೇ ದೇಶದ ಪ್ರಜೆಗಳು. ಕೇವಲ ಮದ್ರಾಸಿನವರು ಮಾತ್ರ ಭಾರತೀಯರಾ? ನಾನು ಬೇರೆ ರಾಜ್ಯಕ್ಕೆ ನೀರು ಕೊಡಬೇಡಿ ಅಂತಾ ಹೇಳ್ತಿಲ್ಲ. ನಮಗೂ ಮತ್ತು ಮದ್ರಾಸಿನವರೆಗೂ ಸರಿಯಾದ ಮಾರ್ಗದಲ್ಲಿ ನೀರನ್ನು ಹಂಚಿಕೆ ಮಾಡಿ ಅಂತಾ ಕೇಳ್ತಿವಿ ಅಂತಾ ಅಂಬರೀಶ್ ಅಂದ್ರು.
Advertisement
ಎಲ್ಲ ರಾಜ್ಯದವರೂ ತಮ್ಮ ಸ್ವಾರ್ಥವನ್ನು ಬಿಟ್ಟರೆ ಮಹದಾಯಿ ಸಮಸ್ಯೆ ಒಂದು ದಿನದಲ್ಲಿ ಬಗೆಹರಿಯುತ್ತದೆ. ತಮಿಳುನಾಡು ಮತ್ತು ಗೋವಾದವರು ಎಷ್ಟು ಸಂಸದರನ್ನು ನೀಡಿದ್ದಾರೆ. ಕರ್ನಾಟಕದವರು ಭಾರತೀಯರು ಅಲ್ವಾ..? ಪ್ರಧಾನಿ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಅಂತಾ ಅಸಮಾಧಾನ ವ್ಯಕ್ತಪಡಿಸಿದರು.
Advertisement