ಕೆಜಿಎಫ್ ಸಿನಿಮಾದ ನಂತರ ಮತ್ತೊಂದು ಕನ್ನಡದ ಭಾರೀ ಬಜೆಟ್ ಸಿನಿಮಾ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ (Kabzaa) ಸಿನಿಮಾವನ್ನು ನೂರಾರು ಕೋಟಿ ಕೊಟ್ಟು ಅಮೆಜಾನ್ ಪ್ರೈಮ್ ಖರೀದಿಸಿದ್ದು, ಬಲ್ಲ ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾವನ್ನು ಖರೀದಿಸಿದಷ್ಟೇ ಈ ಸಿನಿಮಾವನ್ನೂ ಕೊಂಡುಕೊಳ್ಳಲಾಗಿದೆ. ಹಾಗಾಗಿ ಕನ್ನಡದ ಮತ್ತೊಂದು ಸಿನಿಮಾಗೆ ಡಿಮಾಂಡ್ ಕ್ರಿಯೇಟ್ ಆಗಿದೆ.
Advertisement
ಅಮೆಜಾನ್ ಪ್ರೈಮ್ ನಲ್ಲಿ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಹಣಕೊಟ್ಟು ಖರೀದಿಸಿದ ಸಿನಿಮಾ ಕೆಜಿಎಫ್ 2 ಎಂದು ಬಣ್ಣಿಸಲಾಗಿತ್ತು. ಇದೀಗ ಕಬ್ಜ ಕೂಡ ಅದೇ ಸಾಲಿಗೆ ಸೇರಿದೆ. ಈ ಪ್ರಮಾಣದ ಮೊತ್ತಕ್ಕೆ ಕಬ್ಜ ಸಿನಿಮಾ ಸೇಲ್ ಆಗಿದ್ದಕ್ಕೆ ಮೇಕಿಂಗ್ ಮತ್ತು ಸ್ಟಾರ್ ಗಳ ಕಾಂಬಿನೇಷನ್ ಕಾರಣ ಎಂದು ಹೇಳಲಾಗುತ್ತಿದೆ. ಟೀಸರ್ ಬಿಡುಗಡೆಗೂ ಮುನ್ನವೇ ಹಲವು ಓಟಿಟಿ ವೇದಿಕೆಗಳು ನಿರ್ದೇಶಕರನ್ನು ಸಂಪರ್ಕಿಸಿದ್ದವು. ಆಗ ಹೇಳಿದ ಮೊತ್ತಕ್ಕೂ ಟೀಸರ್ ಬಿಡುಗಡೆಯಾದ ನಂತರ ಆಗಿರುವ ವ್ಯಾಪಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ
Advertisement
Advertisement
ಉಪೇಂದ್ರ (Upendra) ಮತ್ತು ಸುದೀಪ್ (Sudeep) ಕಾಂಬಿನೇಷನ್ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆದ ನಂತರ, ಈ ಸಿನಿಮಾವನ್ನೂ ಕೆಜಿಎಫ್ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಅದ್ಧೂರಿ ಮೇಕಿಂಗ್, ಸ್ಟಾರ್ ನಟರ ಸಮಾಗಮಾ, ಆರ್.ಚಂದ್ರು (R. Chandru) ಅವರ ಈವರೆಗೂ ಸಕ್ಸಸ್ ಮತ್ತು ಸಿನಿಮಾದ ಗುಣಮಟ್ಟದ ಕಾರಣದಿಂದಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕಬ್ಜಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಒಂಬತ್ತು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.
Advertisement
ಸಿನಿ ಪಂಡಿತರ ಲೆಕ್ಕಾಚಾರದಂತೆ ಕಬ್ಜ ಸಿನಿಮಾ ಕೂಡ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆಯಲಿದೆ ಎಂದು ಅಂದಾಜಿಸಲಾಗಿದೆ. ದೇಶ ಮತ್ತು ವಿದೇಶಗಳಲ್ಲಿ ಸೇರಿ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕೂಡ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಹಲವು ಅಚ್ಚರಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ಸಿನಿಮಾಗೆ ಭಾರೀ ಬೇಡಿಕೆ (Demand) ಬಂದ ಕಾರಣದಿಂದಾಗಿ ಸದ್ಯ ನಿರ್ದೇಶಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರಂತೆ.