– 40 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣ ನೀಡುವ ಗುರಿ
ನವದೆಹಲಿ: ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗುವ ಬದ್ಧತೆಯನ್ನು ಮತ್ತೊಮ್ಮೆ ಅಮೆಜಾನ್(Amazon) ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾದ ಅಮೆಜಾನ್ CEO ಆ್ಯಂಡಿ ಜಸ್ಸಿ(Andy Jassy ), 2026 ರಿಂದ 2030ರ ವರೆಗೆ ಭಾರತದಲ್ಲಿ 48 ಶತಕೋಟಿ ಡಾಲರ್ (4.53 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಈ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿ ಇ-ಕಾಮರ್ಸ್, ಕೃತಕ ಬುದ್ಧಿಮತ್ತೆ (ಎಐ), ಕ್ಲೌಡ್ ಸೇವೆಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳ ವಿಸ್ತರಣೆಗೆ ಈ ಹೂಡಿಕೆ ನೆರವಾಗಲಿದೆ ಎಂದು ಅಮೆಜಾನ್ ತಿಳಿಸಿದೆ.
ಇದರ ಜೊತೆಗೆ 2030ರೊಳಗೆ ಭಾರತದಲ್ಲಿ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೆಚ್ಚುವರಿಯಾಗಿ 13 ಶತಕೋಟಿ ಡಾಲರ್ (1.23 ಲಕ್ಷ ಕೋಟಿ ರೂ) ಹೂಡಿಕೆ ಮಾಡುವುದಾಗಿಯೂ ಜಸ್ಸಿ ಘೋಷಿಸಿದ್ದಾರೆ. ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಎಡಬ್ಲುಎಸ್ (ಅಮೆಜಾನ್ ವೆಬ್ ಸರ್ವಿಸಸ್) ಡೇಟಾ ಸೆಂಟರ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲು ಈ ಹಣ ಬಳಸಲಾಗುತ್ತದೆ.
Really enjoyed my meeting with Prime Minister @narendramodi about what’s ahead for Amazon in India.
We’ve been serving customers, sellers, developers, startups, and enterprises in India for more than a decade and just getting started.
Shared that we’re investing $48 billion… pic.twitter.com/CSiwPTiEBh
— Andy Jassy (@ajassy) June 25, 2026
ಈ ಹೂಡಿಕೆಯಿಂದ ಸ್ಟಾರ್ಟ್ಅಪ್‌ಗಳು, ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಧಾರಿತ ಎಐ ಸೇವೆಗಳು, ಕ್ಲೌಡ್ ತಂತ್ರಜ್ಞಾನ ಮತ್ತು ಡೆವಲಪರ್ ಟೂಲ್‌ಗಳು ಲಭ್ಯವಾಗಲಿವೆ. ಇದರಿಂದ ಹೊಸ ಆವಿಷ್ಕಾರಗಳು ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ.
ಭಾರತದಲ್ಲಿ ಅಮೆಜಾನ್ ಕಳೆದ ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಿದೆ. ಈ ಅವಧಿಯಲ್ಲಿ 1.2 ಕೋಟಿ ಸಣ್ಣ ಉದ್ಯಮಗಳನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸಿದೆ. 20 ಬಿಲಿಯನ್ ಡಾಲರ್‌ಗಿಂತ (1.89 ಲಕ್ಷ ಕೋಟಿ ರೂ.) ಹೆಚ್ಚು ಇ-ಕಾಮರ್ಸ್ ರಫ್ತಿಗೆ ನೆರವಾಗಿದೆ. ಅಲ್ಲದೆ 28 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ಬೆಂಬಲ ನೀಡಿದೆ.
ಭಾರತದಲ್ಲಿ ಗ್ರಾಹಕರು, ಮಾರಾಟಗಾರರು, ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಶೇಷವಾಗಿ ಇ-ಕಾಮರ್ಸ್, ಎಐ ಮತ್ತು ಕ್ಲೌಡ್ ಕ್ಷೇತ್ರಗಳಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದೇವೆ. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ದೃಷ್ಟಿಕೋನ ನಮಗೆ ಪ್ರೇರಣೆಯಾಗಿದೆ ಎಂದು ಆ್ಯಂಡಿ ಜಸ್ಸಿ ಬಣ್ಣಿಸಿದ್ದಾರೆ.ಇದನ್ನೂ ಓದಿ: WhatsApp ಮುಖ್ಯಸ್ಥರಾಗಿ CRED ಸಂಸ್ಥಾಪಕ ಕುನಾಲ್ ಶಾ ನೇಮಕ
ಮುಂದಿನ ವರ್ಷಗಳಲ್ಲಿ 38 ಲಕ್ಷ ಉದ್ಯೋಗ ಸೃಷ್ಟಿಗೆ 80 ಬಿಲಿಯನ್ ಡಾಲರ್ (7.55 ಲಕ್ಷ ಕೋಟಿ ರೂ.) ರಫ್ತು ಗುರಿ ತಲುಪುವುದು, 1.5 ಕೋಟಿ ಸಣ್ಣ ಉದ್ಯಮಗಳಿಗೆ ಎಐ ಸೌಲಭ್ಯ ಕಲ್ಪಿಸುವುದು ಮತ್ತು 40 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ ಶಿಕ್ಷಣ ನೀಡುವ ಗುರಿಯನ್ನು ಅಮೆಜಾನ್ ಹೊಂದಿದೆ. ಭಾರತದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಅಮೆಜಾನ್ ನೀಡಿರುವ ಈ ಘೋಷಣೆ ದೇಶದ ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ ಭಾರತಕ್ಕೂ ಬಂತು ವಾಟ್ಸಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಪ್ಲಸ್ – ತಿಂಗಳಿಗೆ ಎಷ್ಟು ದರ? ಏನು ವಿಶೇಷ ಫೀಚರ್ ಸಿಗುತ್ತೆ?
