ನವದೆಹಲಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಹೆಸರುವಾಸಿಯಾದ ಅಮೆಜಾನ್ ಮತ್ತು ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ರದ್ದುಗೊಳಿಸಿ, ಅಮೆಜಾನ್‍ಗೆ 202 ಕೋಟಿ ರೂ. ದಂಡ ವಿಧಿಸಿದೆ.
Advertisement
ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 ಕೋಟಿ ರೂಪಾಯಿಯ ತನ್ನ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಯತ್ನಿಸಿತು. ಆಗ ಅಮೆಜಾನ್ ಇದ್ದಕ್ಕೆ ತಕರಾರು ಎತ್ತಿತ್ತು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!
Advertisement
Advertisement
ಮಾರಾಟಕ್ಕೆ ಅಪಸ್ವರ ಎತ್ತಿದ್ದಕ್ಕೆ ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ದಾಖಲಿಸಿತ್ತು. ಇದೀಗ ದೂರನ್ನು ಪಲೀಶಿಸಿ ಸಿಸಿಐ 57 ಪುಟಗಳ ಆದೇಶವನ್ನು ಹೊರಡಿಸಿದೆ. ಜೊತೆಗೆ ಈ ಹಿಂದೆ 2019ರಲ್ಲಿ ಮಾಡಿದ ಡೀಲ್‍ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಹಾಗಾಗಿ ಅಲ್ಲಿಯ ವರೆಗೆ 2019ರಲ್ಲಿ ನೀಡಲಾಗಿರುವ ಅನುಮೋದನೆ ಸ್ಥಗಿತವಾಗಿರುತ್ತದೆ ಎಂದು ಆದೇಶಿಸಿದೆ. ಇದರಿಂದ ಅಮೆಜಾನ್‍ಗೆ ಹಿನ್ನಡೆ ಉಂಟಾಗಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಿಂದ 465 ದಿನಗಳವರೆಗೆ ವ್ಯಾಲಿಡಿಟಿ ಆಫರ್ ರಿಲೀಸ್
Advertisement
ಅಮೆಜಾನ್ ವಾದ ಏನು?
2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್ ಗ್ರೂಪ್‍ನಲ್ಲಿ ನಾವು 1,460 ಕೋಟಿ ಹೂಡಿಕೆ ಮಾಡಿದ್ದೇವೆ. ಒಪ್ಪಂದ ಪ್ರಕಾರ, ಫ್ಯೂಚರ್ ಸಮೂಹವು ತನ್ನ ಆಸ್ತಿಯನ್ನು ನಿಬರ್ಂಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್ ಸಹ ಸೇರಿಕೊಂಡಿದೆ. ಈ ಒಪ್ಪಂದ ನಡೆದಿದ್ದರೂ 2020ರ ಆಗಸ್ಟ್‍ನಲ್ಲಿ ಫ್ಯೂಚರ್ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು 2019ರಲ್ಲಿ ಫ್ಯೂಚರ್ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‍ನ ವಾದವಾಗಿದೆ.
ಫ್ಯೂಚರ್ ಗ್ರೂಪ್ ಮತ್ತು ಅಮೆಜಾನ್ ನಡುವಿನ ಕಾನೂನು ಹೋರಾಟದಲ್ಲಿ ಫ್ಯೂಚರ್ ಗ್ರೂಪ್‍ಗೆ ಮುನ್ನಡೆ ಸಿಕ್ಕಿದ್ದು, ಅಮೆಜಾನ್‍ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಕಿರುವ ದಂಡದ ಬಗ್ಗೆ ಪ್ರಶ್ನೆ ಮಾಡುವ ಸಾಧ್ಯತೆ ಇದೆ.