ಆಲುವಾ (ಕೇರಳ): ಐಫೋನ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿದ ಗ್ರಾಹಕನಿಗೆ ಅಮೆಜಾನ್ 70,900 ರೂ. ವಾಪಸ್ ಕೊಟ್ಟಿದೆ. ಆಲುವಾ ನಿವಾಸಿ ನೂರುಲ್ ಅಮೀನ್ ಎಂಬವರು ಐಫೋನ್ 12 ಖರೀದಿಸಲೆಂದು 70,900 ರೂಪಾಯಿಯನ್ನು ಅಮೆಜಾನ್ ಮೂಲಕ ಪಾವತಿಸಿದ್ದರು. ಆದರೆ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಪಾವತಿಸಿದ ಸಂಪೂರ್ಣ ಹಣ ಮೋಸ ಹೋದ ಗ್ರಾಹಕನ ಖಾತೆಗೆ ವಾಪಾಸಾಗಿದೆ.
ಏನಾಗಿತ್ತು?: ಕೇರಳದ ನೂರುಲ್ ಅಮೀನ್ ಅಕ್ಟೋಬರ್ 12 ರಂದು ಅಮೆಜಾನ್ ಮೂಲಕ ಐಫೋನ್ 12 ಆರ್ಡರ್ ಮಾಡಿದ್ದರು. ಇದಕ್ಕೆ ಅವರು ತಮ್ಮ ಕ್ರೆಡಿಟ್ ಕಾರ್ಡ್ ಬಳಸಿದ್ದರು. ಆದರೆ ಮನೆಗೆ ಬಂದ ಪಾರ್ಸೆಲ್ ಓಪನ್ ಮಾಡಿದಾಗ ಅದರಲ್ಲಿ ಮೊಬೈಲ್ ಬದಲು ಬಟ್ಟೆ ಒಗೆಯುವ ಸೋಪ್ ಹಾಗೂ 5 ರೂಪಾಯಿ ನಾಣ್ಯ ಸಿಕ್ಕಿತ್ತು. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು
Advertisement
Advertisement
ಪ್ರಮುಖ ಆನ್‍ಲೈನ್ ಸ್ಟೋರ್‌ನ ಹೈದರಾಬಾದ್‍ನಲ್ಲಿರುವ ಮಾರಾಟಗಾರರು ಈ ಫೋನನ್ನು ಕಳಿಸಿದ್ದರು. ಆಲುವಾ ತಲುಪುವ ಮುನ್ನ ಸೇಲಂನಲ್ಲಿ ಈ ಫೋನ್ ಇತ್ತು ಎಂಬ ವಿಚಾರ ಆನ್‍ಲೈನ್ ಟ್ರ್ಯಾಕಿಂಗ್ ಮೂಲಕ ಗೊತ್ತಾಗಿದೆ. ಹೀಗಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಮುಂದೆಯೇ ಈ ಬಾಕ್ಸ್ ಓಪನ್ ಮಾಡಿದ್ದರು. ಜೊತೆಗೆ ಇದರ ವೀಡಿಯೋ ಕೂಡಾ ಶೂಟ್ ಮಾಡಿದ್ದರು. ಇದನ್ನೂ ಓದಿ: ಆರ್ಡರ್ ಮಾಡಿದ್ದು ಐಫೋನ್, ಸಿಕ್ಕಿದ್ದು ಬಾರ್ ಸೋಪ್, 5ರೂ. ನಾಣ್ಯ – ವ್ಯಕ್ತಿ ಶಾಕ್
Advertisement
ಬಾಕ್ಸ್ ಓಪನ್ ಮಾಡಿದಾಗ ಫೋನ್‍ನಷ್ಟೇ ತೂಕ ಬರುವ ವಸ್ತುಗಳನ್ನು ಬಾಕ್ಸ್‌ನಲ್ಲಿ ಜೋಡಿಸಲಾಗಿತ್ತು. ನೂರುಲ್ ಅಮೀನ್ ಆಗಾಗ ಆನ್‍ಲೈನ್ ಮೂಲಕ ವಸ್ತುಗಳ ಖರೀದಿ ಮಾಡುತ್ತಿದ್ದರು. ತೆಲಂಗಾಣದಿಂದ ಕೇರಳಕ್ಕೆ ಕಳಿಸುವ ವಸ್ತುಗಳು 2 ದಿವಸದೊಳಗೆ ಕೇರಳಕ್ಕೆ ಬಂದು ತಲುಪುತ್ತಿತ್ತು. ಆದರೆ ಈ ಬಾರಿ ಮೂರು ದಿನ ಕಳೆದ ನಂತರ ಬಾಕ್ಸ್ ತಲುಪಿದೆ. ಈ ಬಗ್ಗೆ ಆನ್‍ಲೈನ್ ಕಂಪೆನಿಯ ಕಸ್ಟಮರ್ ಕೇರ್ ಹಾಗೂ ಕೇರಳ ಪೊಲೀಸ್ ಸೈಬರ್ ಸೆಲ್‍ಗೆ ದೂರು ಸಲ್ಲಿಸಿದ್ದರು.
Advertisement
ಬಳಿಕ ಜಿಲ್ಲಾ ಎಸ್‍ಪಿ ಕಾರ್ತಿಕ್‍ಗೆ ದೂರು ನೀಡಿದ್ದರು. ಎಸ್‍ಪಿ ನೇತೃತ್ವದಲ್ಲಿ ಸೈಬರ್ ಠಾಣೆಯ ವಿಶೇಷ ತಂಡ ತನಿಖೆ ಶುರು ಮಾಡಿತು. ಪೊಲೀಸರು ಅಮೆಜಾನ್ ಸಂಪರ್ಕಿಸಿದರು. ನೂರುಲ್ ಅಮೀನ್‌ಗೆ ಬಂದ ಮೊಬೈಲ್ ಬಾಕ್ಸ್‌ನಲ್ಲಿ ಐಎಂಇಐ ನಂಬರ್ ಇತ್ತು. ಇದನ್ನು ಪರಿಶೀಲನೆ ನಡೆಸಿದಾಗ ಮೊಬೈಲ್ ಜಾಖರ್ಂಡ್‍ನಲ್ಲಿ ಬಳಕೆಯಾಗುತ್ತಿರುವ ಮಾಹಿತಿ ಸಿಕ್ಕಿದೆ. ಅದೇ ಐಫೋನ್‍ಗೆ ಆಪಲ್ ಸ್ಟೋರ್ ಖಾತೆಯೂ ಇತ್ತು. ಹಣ ವಾಪಸ್ ಸಿಕ್ಕಿದರೂ ಪ್ರಕರಣ ಮುಂದುವರಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?
ಕಳೆದ ತಿಂಗಳು ಕೇರಳದ ಪರವೂರ್ ಎಂಬಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಒಂದೂ ಕಾಲು ಲಕ್ಷದ ಲ್ಯಾಪ್‍ಟಾಪ್ ಬುಕ್ ಮಾಡಿದ್ದರು. ಅದರೆ ಅವರಿಗೆ ಬಂದ ಬಾಕ್ಸ್‌ನಲ್ಲಿ ನ್ಯೂಸ್ ಪೇಪರ್‌ಗಳು ಮಾತ್ರ ಇದ್ದವು. ಬಳಿಕ ಜಿಲ್ಲಾ ಪೊಲೀಸರು ಮಧ್ಯ ಪ್ರವೇಶಿಸಿ ಹಣ ವಾಪಸ್ ಕೊಡಿಸಿದ್ದರು. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ.