ಶ್ರೀನಗರ: ಅಮರನಾಥ ಯಾತ್ರೆ ಪ್ರಾರಂಭವಾಗಲು ಕೇವಲ ಎರಡು ದಿನಗಳು ಬಾಕಿಯಿದ್ದು, ದೇಗುಲಕ್ಕೆ ಭೇಟಿ ನೀಡಲು ಯೋಜಿಸುವ ಯಾತ್ರಾರ್ಥಿಗಳಿಗೆ ಹೊಸ ಸೂಚನೆಯನ್ನು ಹೊರಡಿಸಲಾಗಿದೆ.
Advertisement
ಅಮರನಾಥ ದೇವಸ್ಥಾನದ ಆಡಳಿತ ಮಂಡಳಿಯು, ಈ ವರ್ಷ ಎಲ್ಲ ಅಮರನಾಥ ಯಾತ್ರಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಯಾವುದೇ ಬಯೋಮೆಟ್ರಿಕ್ ಪರಿಶೀಲಿಸಿದ ಸರ್ಕಾರಿ ಗುರುತಿನ ಚೀಟಿಯೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕು. ಯಾತ್ರೆಗೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‍ಲೈನ್‍ನಲ್ಲಿ ದರ್ಶನ, ಪೂಜೆ, ಹವನ ಮತ್ತು ಪ್ರಸಾದ ಸೌಲಭ್ಯವನ್ನು ಪಡಲಾಗುವುದು ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು
Advertisement
Advertisement
ಯಾತ್ರೆ ಯಾವಾಗ?
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಅಮರನಾಥ ಯಾತ್ರೆಯು ಜೂನ್ 30 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‍ನ 48-ಕಿಮೀ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‍ಬಾಲ್‍ನ 14-ಕಿಮೀ ಬಾಲ್ಟಾಲ್‍ನಿಂದ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 11ರವರೆಗೆ ಯಾತ್ರಿಕರು ಯಾತ್ರೆ ಮಾಡಬಹುದು.
Advertisement
ಬಿಗಿ ಭದ್ರತೆ
ಜಮ್ಮು ಮತ್ತು ಕಾಶ್ಮೀರ ಆಡಳಿತವು ಪವಿತ್ರ ಗುಹೆಗೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಭಾರೀ ಭದ್ರತೆಯನ್ನು ಒದಗಿಸುವ ಮೂಲಕ ಉಗ್ರರ ದಾಳಿಯನ್ನು ತಪ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಮಂಡಳಿಯು ವ್ಯವಸ್ಥೆ ಮಾಡುತ್ತಿದ್ದು, ಭೌತಿಕವಾಗಿ ಯಾತ್ರೆ ಕೈಗೊಳ್ಳಲು ಸಾಧ್ಯವಾಗದವರಿಗೆ ಆನ್‍ಲೈನ್ ದರ್ಶನದ ವ್ಯವಸ್ಥೆಯನ್ನೂ ಮಾಡಿದೆ.
ಆರೋಗ್ಯ ತಪಾಸಣೆ ಕೇಂದ್ರ
ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. 109 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಸಹ ಇದೆ. ಪ್ರಾಥಮಿಕ ಚಿಕಿತ್ಸೆಯ ಸಾಮಾಗ್ರಿಗಳನ್ನು ಯಾತ್ರೆ ಮಾರ್ಗ ಮಧ್ಯೆ ಇಡಲಾಗಿದೆ. ಇದನ್ನೂ ಓದಿ: 2 ವರ್ಷದ ನಂತರ ಆರಂಭವಾಗಲಿದೆ ಅಮರನಾಥ ಯಾತ್ರೆ – ಸೈನಿಕರಿಗೆ ಹೈಟೆಕ್ ಗ್ಯಾಜೆಟ್ ವಿತರಣೆ
ಶೌಚಾಲಯದ ವ್ಯವಸ್ಥೆ
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾತನಾಡಿದ್ದು, ಈ ವರ್ಷದ ವಿಶೇಷ ಗಮನವು ಸ್ವಚ್ಛತೆಯ ಮೇಲೆ ಮಂಡಳಿಯು ‘ಸ್ವಚ್ಛ ಅಮರನಾಥ ಯಾತ್ರೆ’ಗಾಗಿ ಗುರಿಯನ್ನು ಹೊಂದಿದೆ. ನಾವು ಎಲ್ಲ ಮಾರ್ಗಗಳಲ್ಲಿ ಶೌಚಾಲಯಗಳನ್ನು ಒದಗಿಸಿದ್ದೇವೆ. ಒಟ್ಟಾರೆ ಸ್ವಚ್ಛತೆಯ ಬಗ್ಗೆ ನಾವು ತುಂಬಾ ಗಮನ ಕೊಡುತ್ತಿದ್ದೇವೆ. ಸ್ವಚ್ಛ ಭಾರತ ಕೇವಲ ಘೋಷಣೆಯಾಗಿರದೇ ಪ್ರಧಾನಮಂತ್ರಿ ಘೋಷಿಸಿದ ಬದ್ಧತೆಯಾಗಿದೆ ಎಂದು ಹೇಳಿದರು.