ಚೆನ್ನೈ: ಕಾಲಿವುಡ್ ನಟಿ ಅಮಲಾ ಪೌಲ್ ಬಿಕಿನಿ ತೊಟ್ಟಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದ್ದಾರೆ.
ಬಿಕಿನಿ ಧರಿಸಿ ಪಡ್ಡೆಹುಡುಗರ ಮೈ ಚಳಿಬಿಡಿಸುತ್ತಿರುವ ಅಮಲಾ ಪೌಲ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಬಿಕಿನಿ ತೊಟ್ಟು, ಸಮುದ್ರ ತೀರದಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ.
View this post on Instagram
ಇತ್ತೀಚೆಗಷ್ಟೇ ಅಮಲಾ ಪೌಲ್ ನಿರ್ದೇಶಕ ಪವನ್ ಕುಮಾರ್ ಅವರ ಕುಡಿ ಯಡಮೈಥೆ ಮೂಲಕ ವೆಬ್ ಸಿರೀಸ್ಗೆ ಎಂಟ್ರಿ ಕೊಟ್ಟಿದ್ದು, ಎಂಟು ಎಪಿಸೋಡ್ ಇರುವ ಈ ವೆಬ್ ಸೀರಿಸ್ ಸದ್ಯ ಪ್ರಸಾರವಾಗುತ್ತಿದೆ. ಇದರಲ್ಲಿ ಅಮಲಾ ಪೌಲ್ ದುರ್ಗ ಗೌಡ್ ಎಂಬ ಸರ್ಕಲ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ
View this post on Instagram
ಈ ವೆಬ್ ಸೀರಿಸ್ ಕುರಿತ ಕೆಲವು ಪೋಸ್ಟ್ಗಳನ್ನು ಸೆಪ್ಟೆಂಬರ್ 25ರಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಅಮಲಾ ಪೌಲ್, ಇದೀಗ ಬಿಕಿನಿ ಧರಿಸಿರುವ ಫೋಟೋ ಶೇರ್ ಮಾಡಿಕೊಳ್ಳುವ ಜೊತೆಗೆ ದೊಡ್ಡ, ದೊಡ್ಡ ಕ್ಯಾಪ್ಷನ್ಗಳನ್ನು ಬರೆದುಕೊಂಡಿದ್ದಾರೆ. ಸದ್ಯ ಅಮಲಾ ಪೌಲ್ ಬಿಕಿನಿ ಫೋಟೋಗಳು ಅಭಿಮಾನಿಗಳ ಎದೆಬಡಿತವನ್ನು ಏರಿಸುತ್ತಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್
View this post on Instagram
ಅಮಲಾ ಪೌಲ್ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಜೋಡಿಯಾಗಿ ಹೆಬ್ಬುಲಿ ಸಿನಿಮಾದಲ್ಲಿ ಬಣ್ಣಹಚ್ಚಿದ್ದರು. ಅಲ್ಲದೇ ಕಾಲಿವುಡ್ನಲ್ಲಿ ಬಿಗ್ ಸಕ್ಸಸ್ ಕಂಡಿದ್ದ ವಿಐಪಿ ಹಾಗೂ ಅದರ ಮುಂದುವರೆದ ಭಾಗ ವಿಐಪಿ-2 ಸಿನಿಮಾದಲ್ಲಿ ನಟ ಧನುಷ್ಗೆ ನಾಯಕಿಯಾಗಿ ಅಭಿನಯಿಸಿದ್ದರು. ಅಲ್ಲದೇ ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಇದ್ದರಮ್ಮಯಿಲತೋ ಸಿನಿಮಾದಲ್ಲಿ, ದಳಪತಿ ವಿಜಯ್ ಅಭಿನಯದ ತಲೈವಾ ಸಿನಿಮಾ ಸೇರಿದಂತೆ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ.