– ಸಿದ್ದಗಂಗಾ ಮಠದ ಹೆಸರೇಳಿಕೊಂಡು ಬಡ ಜನರಿಂದ ಲಕ್ಷ ಲಕ್ಷ ಲೂಟಿ?
ತುಮಕೂರು: ನಗರದಲ್ಲಿ ನೂತನವಾಗಿ ಆರಂಭವಾದ ಸಿದ್ದಗಂಗಾ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸಿದ್ದಗಂಗಾ ಮಠಕ್ಕೂ ಈ ಆಸ್ಪತ್ರೆಗೂ ಸಂಬಂಧವೇ ಇಲ್ಲದೇ ಇದ್ದರೂ ಮಠದ ಹೆಸರು ಹೇಳಿಕೊಂಡು ಬಡ ಜನರಿಂದ ಲಕ್ಷಲಕ್ಷ ಲೂಟಿ ಮಾಡಿ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Advertisement
ಕಳೆದ 13 ದಿನದ ಹಿಂದೆ ಗೂಳೂರಿನ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ರೇಣುಕಪ್ಪಾಗೆ ಶುಗರ್ ನಿಂದಾಗಿ ಜನನಾಂಗದಲ್ಲಿ ಕೀವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿನಕ್ಕೆ 50 ಸಾವಿರ ರೂ. ಶುಲ್ಕ ಕಟ್ಟಿದರೆ ಮಾತ್ರ ಚಿಕಿತ್ಸೆ ನೀಡುತ್ತೀವಿ ಎಂದು ಆಡಳಿತ ಮಂಡಳಿ ತಾಕೀತು ಮಾಡಿ ದಾಖಲು ಮಾಡಿಕೊಂಡಿದೆ. ಅವಶ್ಯಕತೆ ಇಲ್ಲದೇ ಇದ್ದರೂ 10 ದಿನಗಳ ಕಾಲ ಐಸಿಯುನಲ್ಲಿ ಇರಿಸಿಕೊಂಡಿದ್ದರು. ಆದ್ರೆ ಶುಕ್ರವಾರದಂದು ಆಪರೇಷನ್ ಮಾಡುವಾಗ ರೋಗಿ ರೇಣುಕಪ್ಪಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ರೋಗಿ ಸಾವನಪ್ಪುತ್ತಿದ್ದಂತೆ ಆಪರೇಷನ್ ಮಾಡಿದ ವೈದ್ಯರು ಕಾಲ್ಕಿತ್ತಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ರೇಣುಕಪ್ಪಾ ಸಂಬಂಧಿಗಳು ಆರೋಪಿಸಿದ್ದಾರೆ. ಸುಮಾರು 7 ಲಕ್ಷ ರೂ. ಬಿಲ್ ಮಾಡಿ ನಮ್ಮನ್ನು ವಂಚಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಆಸ್ಪತ್ರೆಯ ಕಟ್ಟಡ ಮಾತ್ರ ಸಿದ್ದಗಂಗಾ ಮಠಕ್ಕೆ ಸಂಬಂಧಿಸಿದ್ದು, ಆದ್ರೆ ಆಡಳಿತ ಎಲ್ಲವೂ ಖಾಸಗಿ ವೈದ್ಯರದ್ದು. ಇದನ್ನೇ ಬಂಡವಾಳವಾಗಿಸಿಕೊಂಡು ಬಡ ರೋಗಿಗಳಿಗೆ ಹೆದರಿಸುತ್ತಾ ಇದ್ದಾರೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ. ಆಸ್ಪತ್ರೆ ಆರಂಭವಾಗಿ ಇನ್ನೂ ಒಂದು ವರ್ಷ ಪೂರೈಸುವುದರೊಳಗೆ 10ಕ್ಕೂ ಹೆಚ್ಚು ನಿರ್ಲಕ್ಷ್ಯದಸಾವಾಗಿದೆ ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv