ರಜಾ ದಿನಗಳು ಬಂತೆಂದರೆ ಸಾಕು ಮಕ್ಕಳು ಕೇಳುವ ತಿಂಡಿ ತಿನಿಸುಮಾಡಿಕೊಡಲು ಅಮ್ಮಂದಿರು ಪರದಾಡುತ್ತಲೇ ಇರುತ್ತಾರೆ. ಮನೆಯಲ್ಲಿ ಮಾಡಿಕೊಟ್ಟಿಲ್ಲ ಎಂದರೆ ಮಕ್ಕಳು ಹೊರಗಡೆ ಸಿಗುವ ತಿನಿಸುಗಳಿಗೆ ಮಾರುಹೋಗುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ಆಲೂಗಡ್ಡೆಯ ಟಿಕ್ಕಿ ಇಷ್ಟವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮನೆಯಲ್ಲಿಯೇ ಆಲೂ ಟಿಕ್ಕಿ ಮಾಡಿಕೊಡಿ. ಇದರಿಂದ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮಗಾಗಿ ಆಲೂ ಟಿಕ್ಕಿ ಮಾಡುವ ವಿಧಾನ ಇಲ್ಲಿದೆ….
Advertisement
ಬೇಕಾಗುವ ಸಾಮಾಗ್ರಿಗಳು
1. ಬೇಯಿಸಿದ ಆಲೂಗಡ್ಡೆ – 3
2. ಬೇಯಿಸಿದ ಬಟಾಣಿ – ಮುಕ್ಕಾಲು ಕಪ್
3. ಕತ್ತರಿಸಿದ ಈರುಳ್ಳಿ – 2
4. ಹಸಿರು ಮೆಣಸಿನ ಕಾಯಿ – 2
5. ಮೆಣಸಿನ ಪುಡಿ – 1 ಚಮಚ
6. ಗರಂ ಮಸಾಲೆ -2 ಚಮಚ
7. ಜೀರಿಗೆ ಪುಡಿ – 1ಚಮಚ
8. ಪುದೀನ ಸೊಪ್ಪು – ಒಂದು ಸಣ್ಣ ಕಪ್
9. ಬ್ರೆಡ್ – 2 ಬೌಲ್
10. ಅಕ್ಕಿ ಹಿಟ್ಟು – 3 ಬೌಲ್
11. ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ
* ಬೇಯಿಸಿದ ಆಲೂಗಡ್ಡೆಯಲ್ಲಿ ಸಿಪ್ಪೆ ತೆಗೆದು ಒಂದು ದೊಡ್ಡ ಬೌಲ್‍ನಲ್ಲಿ ಹಾಕಿರಿ.
* ಈಗ ಅದಕ್ಕೆ ಎಲ್ಲ ಪದಾರ್ಥಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. (ನೀರು ಬಳಸಬಾರದು)
* ಮಿಕ್ಸ್ ಮಾಡಿದ ನಂತರ ಅದನ್ನು ಕೈಯಲ್ಲಿ ಸಣ್ಣದಾಗಿ ಇಡ್ಲಿ ಆಕಾರಕ್ಕೆ ತಟ್ಟಿಕೊಳ್ಳಿ.
* ನಂತರ ಒಲೆಯ ಮೇಲೆ ತವ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ತಟ್ಟಿದ ಪದಾರ್ಥವನ್ನು ಹಾಕಿ ಮಧ್ಯಮ ಉರಿಯಲ್ಲಿಟ್ಟು 5 ನಿಮಿಷ ಎರಡೂ ಬದಿಯನ್ನು ಬೇಯಿಸಿ.
* ಬೆಂದ ನಂತರ ಅದನ್ನು ಒಂದು ಪ್ಲೇಟ್‍ಗೆ ಹಾಕಿ ಸಾಸ್ ಜೊತೆ ಸವಿಯಿರಿ.