ವೀಕೆಂಡ್ ಸಮಯದಲ್ಲಿ ಮನೆಯಲ್ಲಿಯೇ ಇದ್ದು, ಟಿವಿ ನೋಡುತ್ತಾ, ಮಕ್ಕಳು ಆಟವಾಡುತ್ತಾ ರಿಲ್ಯಾಕ್ಸ್ ಮಾಡುತ್ತಿರುತ್ತಾರೆ. ಜೊತೆಗೆ ಏನಾದರೂ ಗರಿಗರಿಯಾಗಿ, ಬಿಸಿಬಿಸಿಯಾಗಿ ತಿನ್ನಲು ಕೇಳುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಇರುವ ಆಲೂಗಡ್ಡೆಯಿಂದ ಬಿಸಿಬಿಸಿಯಾಗಿ ಆಲೂ ಸೇವ್ ಮಾಡಿಕೊಡಬಹುದು. ಆಲೂ ಸೇವ್ ಮಾಡೋದು ಹೇಗೆ ಎನ್ನುವ ವಿವರವನ್ನು ತಿಳಿಸಲಾಗಿದೆ.
Advertisement
Advertisement
ಬೇಕಾಗುವ ಸಾಮಾಗ್ರಿಗಳು
* ಬೇಯಿಸಿದ ಆಲೂಗಡ್ಡೆ – 2
* ಖಾರದ ಪುಡಿ – 2 ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಗರಂ ಮಸಾಲ – ಅರ್ಧ ಚಮಚ
* ಕಡ್ಲೆಹಿಟ್ಟು – ಒಂದು ಬಟ್ಟಲು
* ಎಣ್ಣೆ – ಕರಿಯಲು ಇದನ್ನೂ ಓದಿ: ಸಖತ್ ರುಚಿ – ಮಲ್ಟಿಗ್ರೇನ್ ನಿಪ್ಪಟ್ಟು ರೆಸಿಪಿ
Advertisement
Advertisement
ಮಾಡುವ ವಿಧಾನ
* ಮೊದಲು ಬೇಯಿಸಿದ ಆಲೂಗಡ್ಡೆಯನ್ನು ತುರಿದಿಟ್ಟುಕೊಳ್ಳಿ.
* ಅದಕ್ಕೆ ಕಡ್ಲೆ ಹಿಟ್ಟು, ಖಾರದ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ ಹಿಟ್ಟಿನ ರೀತಿ ಕಲಸಿಡಿ.(ಸೂಚನೆ – ಹಿಟ್ಟು ಕಲಸಲು ನೀರು ಬಳಸಬೇಡಿ)
* ಕಲಸಿದ ಹಿಟ್ಟನ್ನು ಅರ್ಧ ಗಂಟೆ ಮುಚ್ಚಿಡಿ.
* ಬಳಿಕ ಚಕ್ಕುಲಿ ಒರಳಿಗೆ ಸಣ್ಣ ರಂಧ್ರವುಳ್ಳ ಶ್ಯಾವಿಗೆ ಪ್ಲೇಟ್ ಹಾಕಿ.
* ಅದಕ್ಕೆ ಎಣ್ಣೆ ಸವರಿ ಸಣ್ಣ ಉಂಡೆ ಮಾಡಿದ ಹಿಟ್ಟನ್ನು ಹಾಕಿ.
* ಕಾದ ಎಣ್ಣೆಗೆ ನೇರವಾಗಿ ಒರಳಿನಿಂದ ಶ್ಯಾವಿಗೆ ರೀತಿ ಒತ್ತಿ ಹಾಕಿ.
* ಕಂದು ಬಣ್ಣ ಬರುವರೆಗೂ ಕರಿಯಿರಿ.
* ಬಳಿಕ ಖಾರಖಾರವಾಗಿ ಆಲೂ ಸೇವ್ ವನ್ನು ಸವಿಯಿರಿ. ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k