ಕೊರೊನಾ ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಪ್ರತಿದಿನ ಬೇರೆ ಬೇರೆ ರುಚಿಯ ಅಡುಗೆ ಮಾಡಿ ಸವಿಯಿರಿ. ಚಪಾತಿ, ದೋಸೆ, ರೊಟ್ಟಿಗೆ ಅದೇ ಚಟ್ನಿ, ಪಲ್ಯ ತಿಂದು ಬೇಸರವಾಗಿತ್ತದೆ. ಹೀಗಾಗಿ ಆಲೂಗೆಡ್ಡೆಯಿಂದ ಹೊಸ ರುಚಿಯ ಅಡುಗೆ ಮಾಡಿಕೊಂಡು ಸವಿಯಿರಿ. ಆಲೂಗೆಡ್ಡೆಯಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು. ಈಗ ನಿಮಗಾಗಿ ಆಲೂ ಪಾಲಕ್ ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಾಗ್ರಿಗಳು
1. ಆಲೂಗಡ್ಡೆ – 2
2. ಈರುಳ್ಳಿ – 2
3. ಟೊಮೆಟೊ – 1
3. ಹಸಿ ಮೆಣಸಿನಕಾಯಿ – ಎರಡು
4. ಕರಿಬೇವು – ಸ್ವಲ್ಪ
5. ಪಲಾವ್ ಎಲೆ – ಒಂದು
6. ಲವಂಗ – 2
7. ಚಕ್ಕೆ – ಸ್ವಲ್ಪ
8. ಸಾಸಿವೆ- 1/2 ಟೀ ಸ್ಪೂನ್
9. ಎಣ್ಣೆ-ಒಗ್ಗರಣೆ
10. ದನಿಯಾ ಪುಡಿ – 1/2 ಟೀ ಸ್ಪೂನ್
11. ಗರಂ ಮಸಾಲ – 1/2 ಟೀ ಸ್ಪೂನ್
12. ಕತ್ತರಿಸಿದ ಪಾಲಕ್ ಸೊಪ್ಪು – ಒಂದು ಕಪ್
13. ಅಚ್ಚ ಖಾರದ ಪುಡಿ – ಒಂದೂವರೆ ಟೀ ಸ್ಪೂನ್
14. ಉಪ್ಪು – ರುಚಿಗೆ ತಕ್ಕಷ್ಟು
15. ಜೀರಿಗೆ – 1/2 ಟೀ ಸ್ಪೂನ್
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಎರಡು ಆಲೂಗಡ್ಡೆಗಳ ಮೇಲಿನ ಸಿಪ್ಪೆ ತೆಗೆದು, ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
* ಗ್ಯಾಸ್ ಆನ್ ಮಾಡಿಕೊಂಡು ಒಂದು ಪ್ಯಾನ್ ಇಟ್ಟುಕೊಂಡು ಒಗ್ಗರಣೆಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಚಕ್ಕೆ, ಲವಂಗ, ಪಲಾವ್ ಎಲೆ, ಸಾಸಿವೆ, ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ.
* ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಬೇಕು.
* ಈಗ ದನಿಯಾ ಪುಡಿ, ಗರಂ ಮಸಾಲ, ಅಚ್ಚ ಖಾರದ ಪುಡಿ, ಅರಿಶಿಣ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.
* ಮಿಶ್ರಣ ಫ್ರೈ ಆದ ಮೇಲೆ ಕತ್ತರಿಸಿದ ಆಲೂಗಡ್ಡೆ ಸೇರಿಸಿ, ಮೂರರಿಂದ ಐದು ನಿಮಿಷ ಫ್ರೈ ಮಾಡಿಕೊಳ್ಳಿ.
* ಕತ್ತರಿಸಿ ತೊಳೆದಿಟ್ಟುಕೊಂಡಿದ್ದ ಪಾಲಕ್ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಪಾಲಕ್ ಸೊಪ್ಪು ಚೆನ್ನಾಗಿ ಮಿಕ್ಸ್ ಆಗ್ತಿದ್ದಂತೆ ಅರ್ಧ ಕಪ್‍ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಆಲೂಗಡ್ಡೆ ಚೆನ್ನಾಗಿ ಬೇಯುವರೆಗೂ ಬೇಯಿಸಿದರೆ ಹೊಸ ರುಚಿಯ ಆಲೂ ಪಾಲಕ್ ರೆಡಿ.