ಬೆಳಗಾವಿ: ರಾಜ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ನಾವು ಕ್ರಮ ಜರಗಿಸುತ್ತಿದ್ದು, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡ್ತಿದ್ದೇವೆ. ಯಾರು ಹೇಳಿಕೆ ಕೊಡುತ್ತಿದ್ದಾರೆ ಅದನ್ನು ರೆಕಾರ್ಡ್ ಮಾಡುತ್ತಾ ಇದ್ದೇವೆ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಚೋದನಕಾರಿ ಹೇಳಿಕೆ ನೀಡ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡ್ತಿದ್ದೇವೆ. ಯಾರು, ಯಾರು ಹೇಳಿಕೆ ಕೊಡುತ್ತಿದ್ದಾರೋ ಅದನ್ನು ರೆಕಾರ್ಡ್ ಮಾಡುತ್ತಾ ಇದ್ದೇವೆ ಎಂದರು. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು
Advertisement
Advertisement
ಯಾವ ಒಂದು ವರ್ಗಕ್ಕೆ ಮಾತ್ರ ಅಲ್ಲಾ ಎಲ್ಲಾ ಸಮುದಾಯದಯಕ್ಕೂ ಒಂದೇ ಕಾನೂನು ಇರುತ್ತದೆ. ಯಾವ ರೀತಿ ಮಾತನಾಡುತ್ತಾರೆ ಅದನ್ನು ರೆಕಾರ್ಡ್ ಬಿಲ್ಡ್ ಮಾಡಿಕೊಂಡು ಕ್ರಮಜರಗಿಸುತ್ತೇವೆ. ಕೆಲವು ಕಡೆ ಪ್ರಮೋದ್ ಮುತಾಲಿಕ್ ಹೋಗಬಾರದು ಅಲ್ಲಿ 144 ಸೆಕ್ಷನ್ ಹಾಕಿಸಿದ್ದೇವೆ. ಇಂದು ಬೀದರ್ ಹೋಗುತ್ತಿದ್ದರು ಅಲ್ಲಿ ಎಂಟ್ರಿಯಾಗಬಾರದು. ಅನುಭವ ಮಂಟಪ ವಿಚಾರಕ್ಕೆ ಕಾಲಿಡಬಾರದು. ಎಲ್ಲೇಲ್ಲಿ ಏನೂ ಕ್ರಮಜರುಗಿಸಬೇಕು. ಅದನ್ನು ನಾವು ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆ ಏನೂ ಕೆಲಸ ಮಾಡಬೇಕು. ಅದನ್ನು ಮಾಡುತ್ತಿದೆ. ಸಂಘಟನೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಆ ಸಂಘಟನೆಗಳ ವಿರುದ್ಧ ರೆಕಾರ್ಡ್ ಬಿಲ್ಡ್ ಮಾಡುತ್ತಿದ್ದೇವೆ. ಸಮಯ ಬಂದಾಗ ಏನು ಮಾಡೋದಿದೆ ಅದನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ
Advertisement
Advertisement
ಶ್ರೀರಂಗಪಟ್ಟಣ ಚಲೋ ವಿಚಾರಕ್ಕೆ, ಕಾನೂನು ಸುವ್ಯವಸ್ಥೆ ಉಲ್ಲಂಘನೆ ಆಗಲು, ಹದಗೆಡಲು ನಾವು ಆಸ್ಪದ ಕೊಡುವುದಿಲ್ಲ. ಯಾರು ಏನೇ ಹೇಳಿಕೆ ಚಾನಲ್‍ನಲ್ಲಿ ಕೊಡಲಿ ಅಥವಾ ಬೇರೆ ಕಡೆ ಎಲ್ಲಿಯಾದರೂ ಕೊಡಲಿ. ಫೀಲ್ಡನಲ್ಲಿ ಕಾನೂನು ಏನಿದೆ ಅದಕ್ಕೆ ಬದ್ಧವಾಗಿರಬೇಕು. ಯಾರು ಉಲ್ಲಂಘನೆ ಮಾಡಬಾರದು. ಇವತ್ತು ಶ್ರೀರಂಗಪಟ್ಟಣದಲ್ಲಿ ಬಂದೋಬಸ್ತ್ ನಡೆಯುತ್ತಿದೆ. ನಾವು ಅಲ್ಲಿಯೂ ಕೂಡ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಅಲ್ಲಿ ಕಾನೂನು ಅವಹೇಳನ ಮಾಡಿದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಹಿಜಾಬ್‍ಗೆ ಪೊಲೀಸ್ ಇಲಾಖೆಗೆ ನೇರವಾಗಿ ಯಾವುದೇ ಸಂಬಂಧ ಇಲ್ಲ. ಹಿಜಾಬ್ ವಿಚಾರ ಸ್ಕೂಲ್ ಮ್ಯಾನೆಜ್‍ಮೆಂಟ್‍ಗೆ ಇದೆ. ಶಿಕ್ಷಣ ಇಲಾಖೆಗೆ, ಡಿಸಿ ಅವರಿಗೆ ಸಂಬಂಧ ಇದೆ. ಪೊಲೀಸರಿಗೆ ಅದು ನೇರವಾಗಿ ಯಾವುದೇ ಸಂಬಂಧ ಇಲ್ಲ. ಕಾನೂನು ಸುವ್ಯವಸ್ಥೆ ಭಂಗ ಮಾಡಲು ಪ್ರಯತ್ನಪಟ್ಟರೆ ಅವರ ಮೇಲೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಆ ಸಮಯದಲ್ಲಿ ಅವರ ಮುಖ ಕೂಡ ನಾವು ನೋಡುವುದಿಲ್ಲ ಎಂದು ತಿಳಿಸಿದ್ದಾರೆ.
ಮಾಧ್ಯಮದವರು ತಾಂಬೂಲ ಪ್ರಶ್ನೆಯಂತಹ ಸುದ್ದಿಗಳನ್ನು ಹೆಚ್ಚಾಗಿ ತೋರಿಸಬೇಡಿ. ನಿಮಗೂ ಕೂಡ ಜವಾಬ್ದಾರಿ ಇರುತ್ತದೆ. ಹೀಗಾಗಿ ಕೆಲವು ಜನರು ಪ್ರಚಾರ ಬಯಸಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಮಾತನಾಡ್ತಿದ್ದಾರೆ. ಅವರ ಕವರೇಜ್ ಬಂದ್ ಮಾಡಿದರೆ ಮಾರನೇ ದಿನ ಮಾತನಾಡುವುದನ್ನು ತಾವೇ ಬಂದ್ ಮಾಡ್ತಾರೆ. ಎಷ್ಟು ಕವರೇಜ್ ಮಾಡಬೇಕು ಅಷ್ಟು ಮಾತ್ರ ಕವರ್ ಮಾಡಿ ಎಂದರು.