ನವದೆಹಲಿ: ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ 2022 ಪ್ರಕಟವಾಗಿದ್ದು, ಅಲ್ಲು ಅರ್ಜುನ್ ನಟನೆಯ ಪುಷ್ಪ, ಸಿದ್ಧಾರ್ಥ ಮಲ್ಹೋತ್ರ ನಟನೆಯ ಶೇರ್‌ಶಹಾ, ವಿಕ್ಕಿ ಕೌಶಲ್ ಅಭಿನಯದ ಸರ್ದಾರ್ ಉದ್ಧಮ್ ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ.
Advertisement
1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ ಸಂದರ್ಭ ಆಧಾರಿತ ಚಿತ್ರ ʼ83′ ನಟನೆಗಾಗಿ ರಣವೀರ್ ಸಿಂಗ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಕೃತಿ ಸನೂನ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ʼಪುಷ್ಪʼ ತೆಲುಗು ಸಿನಿಮಾಗೆ ದಕ್ಕಿದೆ. ಇದನ್ನೂ ಓದಿ: ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ
Advertisement
Honoured to receive the ‘Best Actor’ award for ‘83’ at the Dadasaheb Phalke International Film Festival Awards 2022 ???? Thank you for the love ♥️????????♾ @Dpiff_official pic.twitter.com/TsEF5N1MJB
— Ranveer Singh (@RanveerOfficial) February 20, 2022
Advertisement
ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ? ಅತ್ಯುತ್ತಮ ನಟ- ರಣವೀರ್ ಸಿಂಗ್
ಅತ್ಯುತ್ತಮ ನಟಿ – ಕೃತಿ ಸನೂನ್
ಅತ್ಯುತ್ತಮ ನಿರ್ದೇಶಕ – ಕೆನ್ ಘೋಷ್
ಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ – ಆಶಾ ಪ್ರಕಾಶ್
ಅತ್ಯುತ್ತಮ ಪೋಷಕ ನಟ – ಸತಿಶ್ ಕೌಶಿಕ್
ಅತ್ಯುತ್ತಮ ಪೋಷಕ ನಟಿ – ಲಾರಾ ದತ್
ಅತ್ಯುತ್ತಮ ಖಳನಾಯಕ – ಆಯುಷ್ ಶರ್ಮಾ
ವಿಮರ್ಶಕರ ಅತ್ಯುತ್ತಮ ಚಿತ್ರ – ಸರ್ದಾರ್ ಉದ್ಧಮ್
ವಿಮರ್ಶಕರ ಅತ್ಯುತ್ತಮ ನಟ – ಸಿದ್ಧಾರ್ಥ್ ಮಲ್ಹೋತ್ರಾ
ವಿಮರ್ಶಕರ ಅತ್ಯುತ್ತಮ ನಟಿ – ಕೈರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟ – ಅಭಿಮನ್ಯು ದಸ್ಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿ – ರಾಧಿಕಾ ಮಂದನ್
ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ – ಅನದರ್ ರೌಂಡ್
ಅತ್ಯುತ್ತಮ ವೆಬ್ ಸೀರಿಸ್ - ಕ್ಯಾಂಡಿ
ವೆಬ್ ಸೀರಿಸ್ ಅತ್ಯುತ್ತಮ ನಟ – ಮನೋಜ್ ಬಾಜ್‌ಪೇಯಿ
ವೆಬ್ ಸೀರಿಸ್ ಅತ್ಯುತ್ತಮ ನಟಿ – ರವೀನಾ ಟಂಡೊನ್
ವರ್ಷದ ಟೆಲಿವಿಷನ್ ಸೀರಿಸ್ – ಅನುಪಮಾ
ಟೆಲಿವಿಷನ್ ಸೀರಿಸ್ ಅತ್ಯುತ್ತಮ ನಟ – ಶಹೀರ್ ಶೇಕ್
ಟಿಲಿವಿಷನ್ ಸೀರಿಸ್ ಅತ್ಯುತ್ತಮ ನಟಿ – ಶ್ರದ್ಧಾ ಆರ್ಯ
ಅತ್ಯುತ್ತಮ ಕಿರು ಚಿತ್ರ – ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ – ವಿಶಾಲ್ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕನಿಕಾ ಕಪೂರ್
ಅತ್ಯುತ್ತಮ ಸಿನಿಮಾಟೋಗ್ರಾಫರ್ - ಜಯಕ್ರಿಷ್ಣ ಗುಮ್ಮಾಡಿ
ಇದನ್ನೂ ಓದಿ: ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?