ಸೌತ್‌ನ ಬಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಕೆಲಸ ಭರದಿಂದ ಸಾಗುತ್ತಿದೆ. ಇದೀಗ ‘ಪುಷ್ಪ 2’ ಚಿತ್ರದ ತಂಡದಿಂದ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಲುಂಗಿಯುಟ್ಟು ಗನ್ ಹಿಡಿದು ಫಹಾದ್ ಫಾಸಿಲ್ (Fahadh faasil) ಎಂಟ್ರಿ ಕೊಟ್ಟಿರುವ ಪೋಸ್ಟರ್ ಅನ್ನು ರಿವೀಲ್ ಮಾಡಲಾಗಿದೆ. ಈ ಮೂಲಕ ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದ್ದಾರೆ.
‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಫಹಾದ್ ವಿಲನ್ ಆಗಿ ಘರ್ಜಿಸಿದ್ದಾರೆ. ಬನ್ವರ್ ಸಿಂಗ್ ಶೆಕಾವತ್ ಪಾತ್ರಕ್ಕೆ ನಟ ಜೀವ ತುಂಬಿದ್ದಾರೆ. ಲುಂಗಿಯುಟ್ಟು ಕೊಡಲಿ ಮತ್ತು ಗನ್ ಹಿಡಿದು ಸಖತ್ ಮಾಸ್ ಅವತಾರದಲ್ಲಿ ಫಹಾದ್ ಕಾಣಿಸಿಕೊಂಡಿದ್ದಾರೆ. ನಟನ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು
View this post on Instagram
ಇನ್ನೂ ರಕ್ತಚಂದನ ಕಳ್ಳ ಸಾಗಣಿಕೆ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಚಿತ್ರೀಕರಿಸಲಾಗಿದೆ. ಡಿ.6ರಂದು ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾ ರಿಲೀಸ್ ಆಗ್ತಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಅನಸೂಯ, ರಾವ್ ರಮೇಶ್ ಸೇರಿದಂತೆ ಹಲವು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.